ಗೌರವ ಡಾಕ್ಟರೇಟ್ ಪಡೆದ – ಟಿ.ಎಸ್ ಮಾನಸ.
ತಿಮ್ಮಪ್ಪನ ಹಳ್ಳಿ ಅ.02

ನಾಯಕನಹಟ್ಟಿ ಹೋಬಳಿಯ ತಿಮ್ಮಪ್ಪನ ಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕರಾದ ಶಿವಣ್ಣನವರ ಮಗಳು ದ್ವಿತೀಯ ಪುತ್ರಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದ ಟಿ.ಎಸ್. ಮಾನಸ ರವರಿಗೆ ತಿಮ್ಮಪ್ಪನಹಳ್ಳಿ ಗ್ರಾಮದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಬಿಳಿ ಚೋಡ್ ಗ್ರಾಮದ ನಿವೃತ್ತ ಶಿಕ್ಷಕರಾದ ಪಿ. ಶಿವಣ್ಣ ಮತ್ತು ಬಿ.ಟಿ ನಾಗರತ್ನಮ್ಮ ರವರ ದ್ವಿತೀಯ ಪುತ್ರಿಯಾದ ಟಿ.ಎಸ್ ಮಾನಸ ರವರು ನಾಯಕನ ಹಟ್ಟಿ ಹೋಬಳಿ ತಿಮ್ಮಪ್ಪನ ಹಳ್ಳಿ ಗ್ರಾಮದಲ್ಲಿ ದಿನಾಂಕ :- 11/ 02 /1994 ರಂದು ಜನಿಸಿದರು. ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಜಗಳೂರಿನ ನಲಂದ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿ, ತನ್ನ ಬಿ.ಎಸ್ಸಿ ಪದವಿಯನ್ನು ಸರ್ಕಾರಿ ತೋಟಗಾರಿಕಾ ಕಾಲೇಜು ಅರಭಾವಿ ಗೋಕಾಕ್ ನಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ ರಾಗಿರುತ್ತಾರೆ. ಅಲ್ಲದೆ ತಮ್ಮ ಪಿ.ಎಚ್.ಡಿಯನ್ನು ಎಂ.ಪಿ ಬಸವರಾಜಪ್ಪ ರವರ ಮಾರ್ಗದರ್ಶನದಲ್ಲಿ “ವಿಲ್ಯೆದೇಲೆ ಬಳ್ಳಿಯಿಂದ ಎಂಡೋಫೈಟ್ ಗಳ ಸಂಶೋಧನೆ” ಎಂಬ ವಿಷಯಕ್ಕೆ ಟಿ.ಎಸ್ ಮಾನಸ ರವರಿಗೆ ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾನಿಲಯದಲ್ಲಿ ದಿನಾಂಕ :- 30/09/2024 ರಂದು ನಡೆದ ಘಟಿಕೋತ್ಸವದಲ್ಲಿ ಗಣಿ ಮತ್ತು ಭೂವಿಜ್ಞಾನ ತೋಟಗಾರಿಕೆ ಸಚಿವರಾದ ಶ್ರೀ ಎಸ್.ಎಸ್ ಮಲ್ಲಿಕಾರ್ಜುನ್ ರವರು ಟಿ.ಎಸ್ ಮಾನಸ ರವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈಗ ಪ್ರಸ್ತುತ ಅವರು ಆಂಧ್ರ ಪ್ರದೇಶದ ಅನಂತಪುರ ಕೃಷ್ಣದೇವರಾಯ ಕೃಷಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಟಿ.ಎಸ್ ಪವನ್, ದೃತಿ ಇಂಜಿನಿಯರ್, ಐಕ್ಯ, ಮಮತಾ ತಂದೆ ಶಿವಣ್ಣ, ತಾಯಿ ನಾಗರತ್ನಮ್ಮ, ಉಪಸ್ಥಿತರಿದ್ದರು. ಅಲ್ಲದೆ ಸ್ನೇಹಿತರು ಮತ್ತು ಕುಟುಂಬದವರು, ಬಂಧು ಬಳಗದವರು, ಹಿತೈಷಿಗಳು ಟಿ.ಎಸ್ ಮಾನಸ ರವರಿಗೆ ಶುಭ ಕೋರಿದ್ದಾರೆ.
ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ