“ವಿಶ್ವ ಮೆಚ್ಚುವ ಮಹಾತ್ಮ ಗಾಂಧೀಜಿ ಶಾಸ್ತ್ರೀಜಿ ಜಯಂತಿ ಭಾರತಾಂಬೆಯ ಹೆಮ್ಮೆ”…..

ಅಕ್ಟೋಬರ್ 2 ರಂದು ಜನಿಸಿದ ವಿಶ್ವ
ಮರೆಯದ ಮಹಾನ್ ನಾಯಕರು
ಸತ್ಯ ನಿತ್ಯ ಶ್ರೇಷ್ಠ ನಾಯಕ ಮಹಾತ್ಮಗಾಂಧಿಜಿ
ಸೌಮ್ಯ ಸ್ವಭಾವ ಪ್ರಾಮಾಣಿಕ ಸ್ವಾಭಿಮಾನಿ
ಲಾಲ್ ಬಹಾದುರ್ ಶಾಸ್ತ್ರೀಜಿ
ಅಹಿಂಸಾ ಮಾರ್ಗದಿ ದೇಶ ಕಟ್ಟಿದ ವಿಶ್ವ
ಭಾತೃತ್ವದ ಬಾಪೂಜಿ
ಕ್ರಿಯಾಶೀಲ “ಶ್ವೇತ ಕ್ರಾಂತಿ” ಹರಿಕಾರ ಶಾಸ್ತ್ರೀಜಿ
“ಸತ್ಯ ಮೇವ ಜಯತೆ ಸಾರಿದ ಸರ್ವೋತ್ಕೃಷ್ಟ
ಮಹಾತ್ಮ ಗಾಂಧೀಜಿ
“ಜೈ ಜವಾನ್ ಜೈ ಕಿಸಾನ್” ವಿಶ್ವದಿ ನಿಜ ಸಾರಿದ
ಶುದ್ಧತೆಯ ಪ್ರತಿಪಾದಕ ಶಾಸ್ತ್ರೀಜಿ
ಅಸ್ಪ್ರಶ್ಯತೆ ಬಡತನ ಅಜ್ಞಾನ ಹೊಗಲಾಡಿಸಲು
ಪಣತೊಟ್ಟ ಧೀಮಂತ ನಾಯಕ ಮಹಾತ್ಮಾ
ಗಾಂಧಿಜಿ
ದೇಶದ ಹಿತವೇ ನನ್ನ ಗುರಿ ವಿಶ್ವದಿ ಸಾರಿದ
ಮುಗ್ಧತೆಯ ಮಹಾನ್ ದೇಶದ ರೂವಾರಿ
ಶಾಸ್ತ್ರೀಜಿ
ಭಾರತಾಂಬೆ ಕಿರುತಿ ಸದಾ ವಿಶ್ವದಿ ಬೆಳಗುವ
ಮಹಾನ್ ಚೇತನಗಳ ಜನಿಸಿದ ಅಮೃತ ಘಳಿಗೆ
ಸರ್ವ ಜನಾಂಗದ ಹೃದಯ ಸಾಮ್ರಾಟರು
ವಿಶ್ವದಿ ಶುಭ ದಿನ ತರಲಿ ಶುಭಕರ
ಅನವರತ ಬೆಳಗುತಿರಲಿ ಮಹಾ ಚೇತನಗಳ
ಸುವಿಚಾರ ಸುಕಾರ್ಯ
ಸದಾ ಭಾರತೀಯರ ಹೃದಯ ಸಾಮ್ರಾಜ್ಯದಲ್ಲಿ
ಅನವರತ ಮಹಾತ್ಮ ಗಾಂಧೀಜಿ ಶಾಸ್ತ್ರಿಜಿ
ಅಮರರು ಜಗದಲಿ.

ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೇಪ್ಪ ಅಂಗಡಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟೆ