ಕೊಟ್ಟೂರು ಪಟ್ಟಣ ಪಂಚಾಯಿತಿಯಲ್ಲಿ ಗಾಂಧಿ ಜಯಂತಿ ಆಚರಣೆ.
ಕೊಟ್ಟೂರು ಅ.02

ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ದಿನಾಂಕ: 02.10.2024 ರಂದು ಮಹಾತ್ಮ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು, ಮುಖ್ಯಾಧಿಕಾರಿಗಳು,ಸಿಬ್ಬಂದಿ ವರ್ಗದವರಿಂದ ಪಟ್ಟಣದ ಗಾಂಧಿ ಸರ್ಕಲ್ ಹತ್ತಿರ ಇರುವ ಗಾಂಧಿ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ನಂತರ ಕಛೇರಿಯಲ್ಲಿ ಪೂಜೆ ಸಲ್ಲಿಸಿ, ಸ್ವಚ್ಛತೆಯೇ ಸೇವೆ-2024 ಸಸಿ ನೆಡುವ ಕಾರ್ಯಕ್ರಮ ನೆರವೇರಿಸಿ ಗಾಂಧಿರವರ ತತ್ವ ಸಿದ್ದಾಂತಗಳ ಕುರಿತು ಪ್ರತಿಜ್ಞೆ ಮಾಡಲಾಯಿತು.

ಹಾಗೂ ಜಯಂತಿ ಕಾರ್ಯಕ್ರಮ ಕುರಿತು ಎ.ನಸರುಲ್ಲಾ ಮುಖ್ಯಾಧಿಕಾರಿಗಳು ಮಾತನಾಡಿ ಗಾಂಧೀಜಿಯವರು ಸ್ವತಂತ್ರ ಹೋರಾಟ ಬಗ್ಗೆ ತಿಳಿಸಿ ಅವರ ತತ್ವಗಳನ್ನು ಅಳವಡಿಸಿ ಕೊಳ್ಳುವಂತೆ ತಿಳಿಸಿದರು, ಹಾಗೂ ಕಾಯ್ರಮದಲ್ಲಿ ಭಾಗವಹಿಸಿದ ಪಂಡಿತರಾಧ್ಯ, ವಕೀಲರು ಗಾಂಧಿಜಿಯವರು ಕೊಟ್ಟೂರು ಪಟ್ಟಣಕ್ಕೆ ಭೇಟಿ ನೀಡಿದ ಇತಿಹಾಸ, ಸ್ವಾತಂತ್ರ್ಯ ಹೋರಾಟಕ್ಕೆ ಕೊಟ್ಟೂರು ಪಟ್ಟಣದ ಕೊಡುಗೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ಡಿ.ಎಸ್.ಎಸ್ ಮುಂಖಡರು ಬಿ.ಮರಿಸ್ವಾಮಿ, ಉಪಾಧ್ಯಕ್ಷರಾದ ಜಿ.ಸಿದ್ದಯ್ಯ ಜಯಂತಿ ಕಾರ್ಯಕ್ರಮ ಕುರಿತು ಮಾತನಾಡಿದರು ಹಾಗೂ ಅಧ್ಯಕ್ಷರಾದ ಬದ್ದಿ ರೇಖಾ ರವರು ಅಧ್ಯಕ್ಷೀಯ ಭಾಷಣ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭಕೋರಿ, ಯಶಸ್ವಿ ಗೊಳಿಸಿದ್ದಕ್ಕೆ ಧನ್ಯವಾದ ತಿಳಿಸಿದರು. ಹಾಗೂ ಬೆಳಿಗ್ಗೆ 11.00 ಗಂಟೆಯಿಂದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖ್ಯಾಧಿಕಾರಿಗಳು, ಸಿಬ್ಬಂದಿ ವರ್ಗವದರಿಂದ ಮನೆ-ಮನೆಗೆ ನಮೂನೆ-3 (ಖಾತಾ ಪುರವಣಿ) ವಿತರಿಸಲಾಯಿತು. ನಂತರ ಪಟ್ಟಣದ ಉಜ್ಜಿನಿ ರಸ್ತೆ ನೀರಿನ ಟ್ಯಾಂಕ್ ಹತ್ತಿರ ಸ್ವಚ್ಛತಾ ಕಾರ್ಯ ಕೈ ಗೊಳ್ಳಲಾಯಿತು. ಹಾಗೂ 13 ನೇ ವಾರ್ಡ್ ಭೇಟಿ ನೀಡಿ ಸ್ವಚ್ಚತೆ ಹಾಗೂ ನೀರು ಸರಬರಾಜು ಕುರಿತು ಪರಿಶೀಲನೆ ಮಾಡಲಾಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್,ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು