ಮಹಾತ್ಮ ಗಾಂಧೀಜಿಯವರು ಮತ್ತು ಲಾಲ್ ಬಹಾದುರ್ ಶಾಸ್ತ್ರೀಜಿಯವರ ಬದುಕು ನಮಗೆಲ್ಲಾ ಆದರಶನೀಯವಾಗಿದೆ – ಅಮರೇಶ್ ಜಿ.ಕೆ ತಹಶೀಲ್ದಾರ್.

ಕೊಟ್ಟೂರು ಅ.02

ಕೊಟ್ಟೂರು ತಾಲೂಕ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ “ರಾಷ್ಟ್ರಪಿತ ಮಹಾತ್ಮ ಗಾಂಧೀಜಿ” ಹಾಗೂ ಮಾಜಿ ಪ್ರಧಾನಿ “ಲಾಲ್ಬಹದ್ದೂರ್ ಶಾಸ್ತ್ರೀಜಿ” ಯವರ ಜನ್ಮ ದಿನಾಚರಣೆ ಆಚರಿಸಲಾಯಿತು. ಇಬ್ವರು ಮಹನೀಯರ ಭಾವ ಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಭಕ್ತಿಯ ನಮನ ಸಲ್ಲಿಸುತ್ತಾ, ಶಾಂತಿದೂತನಾಗಿ ಶಾಂತಿ ಮತ್ತು ಅಹಿಂಸೆಯ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ದೊರೆಯಲು ಪ್ರಮುಖ ಪಾತ್ರವಹಿಸಿ ಇಡೀ ಜಗತ್ತಿಗೆ ಮಹಾತ್ಮರಾಗಿ ಗಾಂಧೀಜಿಯವರು ಕಂಗೊಳಿಸಿದ್ದಾರೆ ಹಾಗೂ ಸರಳತೆ ಹಾಗೂ ಸಜ್ಜನಿಕೆಯ ಮೂಲಕ ಪ್ರಸಿದ್ದರಾಗಿದ್ದ ಮಾಜಿ ಪ್ರಧಾನಿ ಲಾಲ್ಬಹದ್ದೂರ್ ಶಾಸ್ತ್ರೀಜಿಯವರು ಘೋಷಿಸಿದ “ಜೈ ಜವಾನ್, ಜೈ ಕಿಸಾನ್” ಎನ್ನುವ ಮಂತ್ರ ಭಾರತದ ಅಭಿವೃದ್ಧಿಗೆ ರೈತ ಮತ್ತು ಸೈನಿಕರು ಎಷ್ಟು ಮುಖ್ಯ ರೆನ್ನುವುದನ್ನು ನಿರೂಪಿಸಿದರು. ಈ ಇಬ್ಬರು ಮಹನೀಯರ ಬದುಕು ನಮಗು ಹಾಗೂ ನಮ್ಮ ಮುಂದಿನ ಪೀಳಿಗೆಗೂ ಸಹಾ ಆದರ್ಶನೀಯವಾಗಿದೆ ಎಂದು ಅಮರೇಶ್.ಜಿ.ಕೆ ತಹಶೀಲ್ದಾರರು ಸ್ಮರಿಸಿದರು.

ಈ ಸಮಯದಲ್ಲಿ “ ಭಾರತದ ಸತ್ಪ್ರಜೆಯಾದ ನಾನು, ನಮ್ಮ ವಿಜಯನಗರ ಜಿಲ್ಲೆಯನ್ನು ಸ್ವಚ್ಛ ಹಸಿರು ಜಿಲ್ಲೆಯನ್ನಾಗಿ ಮಾಡಲು ಸದಾ ಶ್ರಮಿಸುತ್ತೇನೆ. ಪೌರ ಕಾರ್ಮಿಕರನ್ನು ಗೌರವ ದಿಂದ ನಡೆಸಿ ಕೊಳ್ಳುತ್ತೇನೆ. ನಮ್ಮ ಸುತ್ತ ಮುತ್ತಲ ಪರಿಸರವನ್ನು ಸ್ವಚ್ಚವಾಗಿಡುತ್ತೇನೆ.ಈ 155 ನೇಯ ಗಾಂಧಿ ಜಯಂತಿ ದಿನದಂದು ವಿಜಯನಗರವನ್ನು ಸ್ವಚ್ಚ ಜಿಲ್ಲೆಯನ್ನಾಗಿ ಮಾಡಲು ಪಣ ತೊಡುತ್ತೇನೆ ಎಂದು ಸ್ವಚ್ಚತಾ ಪ್ರತಿಜ್ಞೆಯನ್ನು ಭೋಧಿಸಿದರು. ಕಾರ್ಯಕ್ರಮದಲ್ಲಿ ಶಿರಸ್ತೆದಾರರಾದ ಅನ್ನದಾನೇಶ ಬಿ ಪತ್ತಾರ್, ಕಂದಾಯ ನಿರೀಕ್ಷಕ ಹಾಲಸ್ವಾಮಿ, ಶಿಕ್ಷಣ ಇಲಾಖೆಯ ಇಸಿಒ ನಿಂಗಪ್ಪ, ಸಿಆರ್ಪಿಗಳಾದ ಅಣಜಿ ಸಿದ್ದಲಿಂಗಪ್ಪ, ರವಿಕುಮಾರ್, ಸಂದೀಪ್, ನಾಗರತ್ನ, ಗಿರಿಜಾ, ಬಣಕಾರ, ಕೊಟ್ರೇಶ್, ಸಿಬ್ಬಂದಿಯಾದ ಮಂಗಳ ಅರಮನೆ, ಮಂಜಮ್ಮ, ಹನಮಂತ, ಭೂಮಾಪಕ ಸಿಬ್ಬಂದಿ ಹಾಗೂ ಇತರರು ಹಾಜರಿದ್ದರು. ಸಿ.ಮ ಗುರು ಬಸವರಾಜ ಸ್ವಾಗತಿಸಿ ನಿರೂಪಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್,ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button