“ಬದುಕುವ ಖುಷಿಯ ಕ್ಷಣದ ಅಮೃತ ಸವಿ ಮನವೆ”…..

ಆಟ ನಮ್ಮದೇ ಇದ್ದರೂ ಸೋಲುಂಡಾಗ
ದೇವರಾಟ ಎನ್ನುವೇ ಮನವೆ
ಸಾಧಿಸಿದಾಗ ಶ್ರಮವೇ ನಮ್ಮ ಉಸಿರು ಎನ್ನುವೆ
ಮನವೆ
ಖುಷಿಯ ಕ್ಷಣ ಅನುಭವಿಸು ಸುಸಮಯ
ಕಾರಣ ಮರೆವೆ ಮನವೆ
ಕಷ್ಟ ನಷ್ಟ ನೋವು ಬಂದಾಗ ತಪ್ಪು
ಸೃಷ್ಠಿಕರ್ತನ ಪವಾಡವೆಂದು ದೂರುವ ದುರುಳ
ಮನವೇ
ಭ್ರಷ್ಟತೆಯ ಗುಣ ಕನಿಷ್ಟ ಸ್ವಚ್ಛತೆಯ ಗುಣ
ಸಿರಿಯ ಸೊಬಗು ಮನವೆ
ಖುಷಿಯ ಕ್ಷಣ ನಗುಮೊಗದಿ ಹಂಚುವುದು
ಒಳಿತು ಮನವೇ
ದು:ಖದ ಸನ್ನವೇಶ ಕಾಣದಿರುವಂತೆ
ಅನುಭವಿಸು ಮನವೇ
ನೇರಾ ನೇರ ಮಾತು ಶ್ರೇಷ್ಠತೆ ಇದ್ದರೂ
ಒಬ್ಬಂಟಿಗ ನಾಗಿಸುವುದು ಮನವೇ
ನಿಸ್ವಾರ್ಥ ಭಾವಕೆ ಪ್ರತಿಫಲ ಇಲ್ಲದಿಲ್ಲ ಮನವೆ
ಬೆಲೆ ಕಟ್ಟಲಾಗದ ದೈವಿಕೃಪೆಯ ಫಲ ನಿನ್ನದೇ
ಮನವೆ
ಒಡೆಯ ನಾಯಕ ಯಜಮಾನಿಕೆ ಬೇಕಾದರೆ
ಶ್ರಮ ನಿಶ್ವಾರ್ಥ ಪ್ರಾಮಾಣಿಕತೆಯೆ
ನಿಜಮೆರಗು ಬೇಕು ಮನವೆ
ಬೇರೆಯವರ ನ್ಯೂನತೆಗಳು ಸರಳವಾಗಿ ನೀ
ಕಾಣುವೆ ಮನವೆ
ಸ್ವಂತತೆಯ ಲೆಕ್ಕ ತಪ್ಪುಗಳೇ ನಿಜ ಕಂದಕ
ಮನವೆ
ತತ್ ಕ್ಷಣ ತಪ್ಪು ತಿಳಿಸುವವನ ಮನ ಅಪರಂಜಿ
ಮನವೆ
ತಪ್ಪು ದಾರಿಗೆ ಏಳೆದು ನಂತರ ದೂರುವವ
ನಿಜ ಅಧಮನು ಮನವೆ
ಸುಮನ ಸುಕಾರ್ಯ ಸುಭಾವದ ನಿಜ ರಕ್ಷಕ
ಆತ್ಮದ ಸ್ವರೂಪ ಪರಮಾತ್ಮ ಮನವೆ
ಜಗದಿ ಜಾಣ ನೀನಾದರೆ ಮನೆಯ ಒಡತಿಗೆ
ನಿಜ ಸೇವಕ ಮನವೆ
ಹೂವುಗಳು ತೋಟದ ನಗೆಯಾದರೆ ಸುಗಂಧ
ದುಂಬಿಗಳ ಪಾಲು ಮನವೆ
ಶ್ರಮದ ಬದುಕು ನಿನ್ನದಾದರೆ ಸುಕೃತ ಫಲ
ಸುಪುತ್ರರ ಪಾಲು ಮನವೆ
ಬಾಳು ಮೂರೆದಿನವಾದರೂ
ಬದುಕುವ ಖುಷಿಯ ಕ್ಷಣದ ಅಮೃತ ಸವಿ
ಮನವೆ
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟ