ಗ್ರಾಮದಲ್ಲಿ ಬೆಂಕಿ ಕಂಡು ಗಾಬರಿಗೊಂಡ ಗ್ರಾಮಸ್ಥರು.
ದಮ್ಮೂರ ಅ.08

ಇಳಕಲ್ಲ ತಾಲೂಕಿನ ದಮ್ಮೂರ ಗ್ರಾಮದ ಗ್ರಾಮಸ್ಥರು ಒಂದು ಕ್ಷಣ ಬೆಂಕಿ ವಾಹನ ಬಂದಿರುವುದು ಕಂಡು ಬೆರಗಾದರೂ ಏನಿದು ನಮ್ಮೂರಲ್ಲಿ ಏಕಾ ಏಕಿಯಾಗಿ ಬೆಂಕಿ ಬೆಂಕಿ ಎಲ್ಲಿ ಬಿದ್ದಿದೆ ಎಂದು ಗೊತ್ತಾಗದೆ ಬೆಂಕಿ ಆರಿಸುವ ಗಾಡಿ ಹಿಂದೆಯೇ ಓಡೋಡಿ ಬಂದ ಘಟನೆ ದಮ್ಮೂರು ಗ್ರಾಮದಲ್ಲಿ ನಡೆಯಿತು. ಗಾಬರಿಗೊಂಡು ಓಡೋಡಿ ಬಂದು ನೋಡಿ ನಮ್ಮೂರಲ್ಲಿ ಯಾವುದಕ್ಕೆ ಬೆಂಕಿಯಾಗಿದೆ ಎಂದು ನೋಡು ವಷ್ಟರಲ್ಲಿಯೇ ಗೊತ್ತಾಯಿತು. ಇದು ಬೆಂಕಿ ಅಲ್ಲ ಅಣುಕು ಪ್ರದರ್ಶನ ಅಂತಾ ಗೊತ್ತಾದ ಮೇಲೆ ನಿಟ್ಟುಸಿರು ಬಿಟ್ಟರು. ಗ್ರಾಮದ ಸಭಾ ಭವನದ ಮುಂದೆ ಇಳಕಲ್ಲಿನ ಎಸ್.ವಿ.ಎಂ ಕಾಲೇಜಿನ ವಿದ್ಯಾರ್ಥಿಗಳ ಎನ್.ಎಸ್.ಎಸ್ ಶಿಬಿರದಲ್ಲಿ ನಡೆದ ಘಟನೆ ಕಂಡು ಒಂದು ಕ್ಷಣ ಗ್ರಾಮದ ಜನರೆಲ್ಲರೂ ದಿಗ್ಬ್ರಾಂತ ಗೊಂಡರು.

ಅಗ್ನಿಶಾಮಕ ವಾಹನ ಬಂದ ತಕ್ಷಣ ಗಾಬರಿಯಿಂದ ಓಡೋಡಿ ಬಂದು ನೋಡಿದರೆ ಅಲ್ಲಿ ನಡೆಯುತ್ತಿರುವುದು ಬೆಂಕಿ ಘಟನೆ ಅಲ್ಲ ಇದು ಪ್ರಾತ್ಯಕ್ಷಿತ ಎಂದು ಗೊತ್ತಾದಾಗ ನಿಟ್ಟುಸಿರು ಬಿಟ್ಟರು ನಂತರ ಎನ್.ಎಸ್.ಎಸ್ ಶಿಬಿರಾರ್ಥಿಗಳಿಗೆ ನಡೆದ ಅಣುಕು ಪ್ರದರ್ಶನದಲ್ಲಿ ಗ್ರಾಮದ ಹಿರಿಯರು ಮತ್ತು ಮಹಿಳೆಯರು ಅಣುಕು ಪ್ರದರ್ಶನವನ್ನು ನೋಡಿ ಸಂಭ್ರಮ ಪಟ್ಟರು.

ಎಸ್.ವಿ.ಎಮ್ ಕಾಲೇಜಿನ ಮಂಜುನಾಥ ಮರೋಳ ಉಪನ್ಯಾಸಕರ ಆಹ್ವಾನ ಮೇರೆಗೆ ಅಗ್ನಿಶಾಮಕ ಇಲಾಖೆಯವರು ಈ ಕಾರ್ಯಕ್ರಮ ನಮ್ಮೂರಲ್ಲಿ ಹಾಕಿ ಕೊಂಡಿರುವುದರಿಂದ ಶಿವರಾತ್ರಿಗಳಷ್ಟೇ ಅಲ್ಲದೆ ನಮಗೂ ಕೂಡ ಬೆಂಕಿಯ ಬಗ್ಗೆ ಜ್ಞಾನ ಮತ್ತು ಅರಿವು ಬಂದಿತ್ತು ಎಂದು ಮಹಿಳೆಯರು ಮತ್ತು ಹಿರಿಯರು ಸಂಭ್ರಮದ ನುಡಿಗಳ ನಾಡಿದರು. ಈ ಮಾಹಿತಿ ಯಿಂದ ನಾವು ಮನೆಯಲ್ಲಿ ಗ್ಯಾಸ್ ಉಪಯೋಗಿಸುವಾಗ ಅನುಸರಿಸ ಬೇಕಾದ ಕ್ರಮಗಳನ್ನು ತಿಳಿದು ಕೊಂಡೆವು ಇದಕ್ಕೆಲ್ಲ ಕಾರಣವೇ ಮಂಜುನಾಥ ಮರೋಳ ಎಂದು ಮಹಿಳೆಯರು ಕೃತಜ್ಞತೆ ಸಲ್ಲಿಸಿದರು.