ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ – ಯತಿನರಸಿಂಗನಂದಾ ಸ್ವಾಮೀಜಿ ವಿರುದ್ಧ ಆಕ್ರೋಶ.
ಮಾನ್ವಿ ಅ.08

ವೈಚಾರಿಕತೆ ಸಿದ್ಧಾಂತ ಹೊಂದಿದ್ದ ಮೊಹಮ್ಮದ್ ಪೈಗಂಬರ್ ಬಗ್ಗೆ ಯತಿನಿಜಾನಂದಾ ಸ್ವಾಮೀಜಿ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಮುಸ್ಲಿಂ ಸಮಾಜದಿಂದ ಮಾನ್ವಿಯಲ್ಲಿ ಪ್ರತಿಭಟನೆ ನಡೆಸಲಾಯಿತು.ಜಾತಿ ಧರ್ಮದ ಹೆಸರಿನಲ್ಲಿ ಅವಹೇಳನಕಾರಿ ಹೇಳಿಕೆ ನೀಡಬಾರದು,

ಆದರೆ ಯತಿನಿಜಾನಂದ ಸ್ವಾಮೀಜಿ ಅವರು ಮೊಹಮ್ಮದ್ ಪೈಗಂಬರ್ ಬಗ್ಗೆ ಕೆಟ್ಟದಾಗಿ ಮಾತಾಡುತ್ತಾರೆ ಅಂದ ಮೇಲೆ ಕೇಂದ್ರ ಸರಕಾರ ಅವರಿಗೆ ಗಲ್ಲು ಶಿಕ್ಷೆ ವಿಧಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಮುಸ್ಲಿಂ ಸಮಾಜದ ಸಾವಿರಾರು ಜನರು ಬೀದಿಗೆ ಬಂದು ಹೋರಾಟ ಮಾಡಲು ಸ್ವಾಮೀಜಿ ಅವರ ಅವಹೇಳಕಾರಿ ಹೇಳಿಕೆಯೇ ಕಾರಣ,ಹೀಗಾಗಿ ಸ್ವಾಮೀಜಿ ವಿರುದ್ಧ ಕ್ರಮ ಜರುಗಿಸಿ ಗಲ್ಲು ಶಿಕ್ಷೆ ವಿಧಿಸಬೇಕೆಂದು ಗುಡುಗಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ.