ಸಾವಿಗೀಡಾದ ಮಕ್ಕಳ ಪೋಷಕರ ಮನೆಗೆ – ಮಾಜಿ ಸಚಿವ ಶ್ರೀರಾಮುಲು ಭೇಟಿ, ಸಂತಾಪ.
ಖಾನಾ ಹೊಸಹಳ್ಳಿ ಅ.11

ಕೂಡ್ಲಿಗಿ ತಾಲೂಕಿನ ಕುಮತಿ ಗ್ರಾಮದಲ್ಲಿ ಕೆರೆಯಲ್ಲಿ ಈಜಲು ಹೋಗಿ ಸಾವಿಗೀಡಾದ ಮಕ್ಕಳ ಪೋಷಕರ ಮನೆಗೆ ಮಾಜಿ ಸಚಿವ ಬಿ. ಶ್ರೀರಾಮುಲು ಭೇಟಿ ನೀಡಿ ಸಾಂತ್ವಾನ ಹೇಳಿ ಧನ ಸಹಾಯ ಮಾಡಿದರು. ಬುಧವಾರ ದಂದು ಸ್ವ ಗ್ರಾಮದ ಚಿನ್ನಹಗರಿ ಹಳ್ಳದಲ್ಲಿ ಈಜಲು ಹೋಗಿದ್ದ ಬಾಲಕರು ಮುಳುಗಿ ಸಾವನ್ನಪ್ಪಿದ್ದ ಸಾಗರ್ (14), ಗುರು (14) ಮತ್ತು ವಿನಯ್ (11) ಎಂಬ ಮೂವರು ಮಕ್ಕಳ ಪೋಷಕರ ಮನೆಗೆ ಗುರುವಾರ ಭೇಟಿ ನೀಡಿ ಸಾಂತ್ವಾನ ಹೇಳಿ ಧನ ಸಹಾಯ ಮಾಡಿದರು. ನಂತರ ವಲಸೆ ಗ್ರಾಮದಲ್ಲಿ ರಸ್ತೆಯ ಪಕ್ಕದಲ್ಲಿ ಇದ್ದ ಗುಡಿಸಿಲು ಮನೆಯನ್ನು ನೋಡಿ ಕಡು ಬಡತನದಲ್ಲಿರುವ ಮನೆ ಮಾಲೀಕನಿಗೆ ತಕ್ಷಣ ಮನೆ ನಿರ್ಮಿಸಿ ಕೊಡುತ್ತೇನೆ. ಸೋಮವಾರ ದಿಂದ ಇವರಿಗೆ ಮನೆ ಆಗುತ್ತೆ ಎಂದು ರೈತನಿಗೆ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಕೂಡ್ಲಿಗಿ ಮಂಡಲ ಅಧ್ಯಕ್ಷ ಬಣವಿಕಲ್ಲು ನಾಗರಾಜ್, ರಾಮದುರ್ಗ ಸೂರ್ಯ ಪಾಪಣ್ಣ, ಪ್ರಧಾನ ಕಾರ್ಯದರ್ಶಿ ಮಂಜಣ್ಣ ಕೂಡ್ಲಿಗಿ, ಸುರೇಶ್ ಹೂಡೇಂ, ಬೋರಣ್ಣ ಕುಮತಿ ಗ್ರಾಮದ ತಿಪ್ಪನ ಗೌಡ್ರು, ಸೋಮಣ್ಣ, ಗ್ರಾಮದ ಹಿರಿಯ ಮುಖಂಡರು ಮತ್ತು ಸುತ್ತಮುತ್ತಲಿನ ಹಳ್ಳಿಯ ಕಾರ್ಯಕರ್ತರು ಭಾಗವಹಿಸಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ