“ನಗು ಮಗು ಬಾಳಿನ ಕಣ್ಮಣಿ”…..

ನಗು ಮಗು
ತಾಯಿಗೆ ಸಿರಿಯು
ತಂದೆಗೆ ಕನಸು
ನೆನಸು
ಕುಟುಂಬದ ಮೆರಗು
ವಂಶದ ಚಿಗುರು
ಬಾಳಿಗೆ ಬೆಳಕು
ಲೋಕದಿ ತಳಕು
ಆಸೆಗೆ ಅರಳು
ಸೃಷ್ಠಿಗೆ ನಗು
ನಂಬಿಕೆಯ ಕುರುಹು
ನಗು ಮಗು
ಬಾಳಿನ ಕಣ್ಮಣಿ
ಜಗದ ಸಿರಿ

—ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ