“ನನ್ನ ತಾಯಿಗೆ ಕವನ ನಮನ”…..

ಅಮ್ಮ… ನೀ ನನ್ನ ಭೂಮಿಗೆ ತಂದೆಯಮ್ಮ.
ಅಮ್ಮ..
ನಿನ್ನ ಕರುಳು ಬಳ್ಳಿಯ,
ನಿನ್ನ ರಕ್ತವನು,
ನಿನ್ನ ಉಸಿರನ್ನು ನನಗೆ ನೀಡಿದೆಯಮ್ಮ..
ಅಮ್ಮ..
ನನ್ನ ಬೆಳೆಸಲು ತುಂಬಾ ಕಷ್ಟಪಟ್ಟೆ,
ನನ್ನ ಮೇಲೆ ನಿನ್ನ ಜೀವವ ಇಟ್ಟೆ..
ಅಮ್ಮ..
ನಾ ಆಡುತ ಬಿದ್ದು ಬಂದಾಗ
ನನ್ನ ಜೊತೆ ನೀನು ಅತ್ತೆ,
ನಾ ನಕ್ಕಾಗ ಆ ನಗುವಿನಲೀ ಎಲ್ಲವ ಮರೆತೇ..
ಅಮ್ಮ..
ನನಗೆ ನೀ ಹೊಡೆದೆ, ಬೈದೆ,
ಪ್ರೀತಿಸಿದೆ,ಮುದ್ದಿಸಿದೆ
ಅದಕ್ಕೆ ನಾನಿಂದು ಹೀಗಾದೆ,
ನನ್ನೀ ಜೀವನಕ್ಕೆ ಏಣಿಯಾದೆ,
ಸಮಾಜಕ್ಕೆ ಉತ್ತಮ ಮಗನಾಗಿಸಿದೆ..
ಅಮ್ಮ..
ಜೀವನದ ಏರು ಇಳಿತಗಳ ಪಾಠ ಕಲಿಸಿ,
ಆಕಸ್ಮಿಕವಾಗಿ ನನಗೆ ಘಾತಗೊಳಿಸಿ,
ನನ್ನಿಂದ ದೂರವಾದೆ ಅಮ್ಮ,
ಅದುವೇ ನನ್ನ ತಾಯಿ ಕೊಟ್ರಮ್ಮ…
ನಿರಂಜನ್ ಕುಮಾರ್ ಎ
ಯುವ ಕವಿಗಳು
ಹೊಸಹಳ್ಳಿ