ಅತಿ ಕಡಿಮೆ ದರದಲ್ಲಿ ಔಷಧಿ ಸಿಂಪಡಣೆ/ರೈತರಿಗೆ ಹೆಚ್ಚಿನ ಉಳಿತಾಯ/ಅತ್ಯಾಧುನಿಕ ತಂತ್ರಜ್ಞಾನ ಡ್ರೋನ್ ಉಪಯೋಗ ದಿಂದ ಸದುಪಯೋಗ.

ಕೆ ಹೊಸಹಳ್ಳಿ ಅ.17

ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ರೈತರು ಸೇರಿದಂತೆ, ಇತರೆ ಭಾಗದಿಂದ ಆಗಮಿಸಿದ ರೈತ ಬಂಧುಗಳಿಗೆ ಸಮನ್ವಯ ಟ್ರಸ್ಟ್ ನಿಂದ “ಡ್ರೋನ್ ಹೆಲಿಕ್ಯಾಪ್ಟರ್ ಬಳಸಿಕೊಂಡು ಸುಸ್ಥಿರ ಆದಾಯ ಗಳಿಸುವಂತೆ ಪ್ರೇರಣೆ ನೀಡುವ ಪ್ರಾತ್ಯಕ್ಷಿಕೆಯ ಕಾರ್ಯಕ್ರಮವನ್ನು ಸಮನ್ವಯ ಟ್ರಸ್ಟ್ ನಿರ್ದೇಶಕ ಎ.ಸಿ ಚೆನ್ನಬಸಪ್ಪ ಇವರ ತಿರುಮಲ ಫಾರಂನಲ್ಲಿ ಬುಧವಾರ ಆಯೋಜಿಸಲಾಗಿತ್ತು. ಸಮನ್ವಯ ಸಾಧನೆ:- ಸಮಾಜದಲ್ಲಿನ ವಿವಿಧ ಸ್ಥರದ ವಿವಿಧ ಕ್ಷೇತ್ರದ ಜನರ ನಡುವೆ ಸಾಮರಸ್ಯವನ್ನು ಬೆಸೆಯುವ ಉದ್ದೇಶದಿಂದ ಸ್ಥಾಪಿಸಿದೆ. ಇದರಲ್ಲಿ ತಜ್ಞರು ಉತ್ತಮ ಅನುಭವಿಗಳು, ಬುದ್ಧಿ ಜೀವಿಗಳು, ಉತ್ಸಾಹಿಗಳು ಹಾಗೂ ಪ್ರತಿಭಾವಂತ ಯುವಕರನ್ನು ಒಳ ಗೊಂಡಂತಹ ಜಾಗತಿಕ ಸಮೂಹವಾಗಿದ್ದು, ಗ್ರಾಮೀಣ ಭಾಗದ ಬಡ ರೈತರ ಏಳಿಗಾಗಿ ಶ್ರಮಿಸುವಲ್ಲಿ ಮಹತ್ತರ ಪಾತ್ರ ಹೊಂದಿದೆ. ಗ್ರಾಮೀಣ ಭಾಗದ ಜನರ ಅಭಿವೃದ್ಧಿಯ ಮೂಲ ಮಂತ್ರವಾಗಿಸಿ ಕೊಂಡು ಈ ಸಮನ್ವಯ ಟ್ರಸ್ಟ್ ಮೂಲತಃ ೨೦೧೧ ರಲ್ಲಿ ದಾವಣಗೆರೆ, ಜಗಳೂರಿನ ಹನುಮಂತಾಪುರ ಗ್ರಾಮದಲ್ಲಿ ಸ್ಥಾಪನೆ ಗೊಂಡಿದೆ.

ನಂಜುಂಡಪ್ಪ ವರದಿ ಹಿನ್ನೆಲೆ ಆಧಾರಿಸಿ ಅತ್ಯಂತ ಹಿಂದುಳಿದ ತಾಲೂಕು ಕೂಡ್ಲಿಗಿಯ ರೈತರ ಶ್ರೇಯೋಭಿಲಾಷೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಅನಕ್ಷರಸ್ಥ ರೈತರಿಗೆ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಮನವರಿಕೆ ಮಾಡುತ್ತಾ, ಬಿತ್ತನೆ ಬೀಜ, ಕೃಷಿ ಉಪಕರಣಗಳು, ಗೊಬ್ಬರ, ಔಷಧಿಗಳು, ಸಾವಯವ ವಿಧಾನ, ಇತ್ಯಾದಿ ಸೇರಿದಂತೆ ರೈತರೊಂದಿಗೆ ಸಮನ್ವಯವನ್ನು ಸಾಧಿಸುತ್ತಿದೆ. ಇದರಿಂದ ರೈತರಿಗೆ ವರದಾನ ವಾಗಿದೆ. ಸಮನ್ವಯ ಪ್ರಾಯೋಜಕತ್ವ ದಡಿಯಲ್ಲಿ ನಿಯೋಸ್ಪಿಂಗ್ ಆಗ್ರೋ-ವೆಟ್ ಫಾರ್ಮಾರ್ ಪ್ರೋಡ್ಯೂರ‍್ಸ ಕಂಪನಿ ಲಿಮಿಟೆಡ್ ಇವರು ರೈತರು ಸುಸ್ಥಿರ ಆದಾಯ ಗಳಿಸುವಂತೆ, ಇದರಲ್ಲಿ ಸಾಫಲ್ಯ ಹೊಂದುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಉಪಯುಕ್ತವಾಗಿವೆ. ಕೃಷಿ ವಿಜ್ಞಾನಿಗಳ ತಂಡ:- ಕೃಷಿ ಅವಲಂಬಿತರಾಗಿ ಪ್ರಾಚೀನ ಕಾಲದ ಬೆಳೆಗಳಿಂದ ಸುಸ್ಥಿರ ಆದಾಯ ಗಳಿಸುವಲ್ಲಿ ವಿಫಲರಾದ ರೈತರನ್ನು ಆಧಾರ ವಾಗಿಟ್ಟುಕೊಂಡು, ಈಗಾಗಲೇ ಕೃಷಿಯಲ್ಲಿ ಪ್ರಗತಿಯನ್ನು ಸಾಧಿಸುತ್ತಿರುವ ರೈತರ ಫಾರಂಗಳಲ್ಲಿ ೨೦೦ ಕ್ಕೂ ಹೆಚ್ಚು ರೈತರನ್ನು ಒಂದೆಡೆ ಸೇರಿಸಿ, ಅವರಿಗೆ ಕೃಷಿ ವಿಜ್ಞಾನಿಗಳಿಂದ ಮಾಹಿತಿಯನ್ನು ನೀಡುವ ಕೆಲಸ ಸಮನ್ವಯ ಟ್ರಸ್ಟ್ ನಿಂದ ಸಾಧ್ಯವಾಗಿದೆ. ಬೆಂಗಳೂರಿನ ಜಿಕೆವಿಕೆ ಯಿಂದ ಆಗಮಿಸಿದ ವಿಶ್ರಾಂತ ಕೃಷಿ ವಿಜ್ಞಾನಿ ಎಂ.ಎ ಶಂಕರ್ ಅವರು ರೈತರಿಗೆ ಉಪಯುಕ್ತ ಮಾಹಿತಿಗಳನ್ನು ಹಂಚಿ ಕೊಂಡರು. ಮಣ್ಣಿನ ಸವಕಳಿ, ಮಳೆ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿದರು. ೨೭ ಮಳೆ ನಕ್ಷತ್ರಗಳಿವೆ, ಅದರಲ್ಲಿ ಕೇವಲ ೧೧ ನಕ್ಷತ್ರಗಳ ಮಳೆಯನ್ನು ಸುರಿಸುತ್ತವೆ. ಓಡುವ ನೀರನ್ನು ಕುಂಟುವಂತೆ ಮಾಡಬೇಕು, ಕುಂಟುವ ನೀರನ್ನು ನಿಲ್ಲಿಸಬೇಕು, ನಿಲ್ಲುವ ನೀರನ್ನು ಬಸಿಯುವಂತೆ ಮಾಡಬೇಕು ಎಂದು ರೈತರಿಗೆ ಮಾರ್ಮಿಕವಾಗಿ ನೀರಿನ ಸಂರಕ್ಷಣೆ ಬಗ್ಗೆ ವಿಷಯವನ್ನು ತಿಳಿಸಿದರು. ನಂತರ ಅತ್ಯಾಧುನಿಕ ತಂತ್ರಜ್ಞಾನದ ಡ್ರೋನ್ ಹೆಲಿಕ್ಯಾಪ್ಟರ್ ಬಳಸಿ ಕೊಂಡು ಔಷಧಿ ಸಿಂಪರಣೆ ಕಾರ್ಯವನ್ನು ಸುಗಮ ಗೊಳಿಸಬಹುದು. ಇದರಿಂದ ಸಮಯ, ಆರೋಗ್ಯ, ಹಣ, ಒತ್ತಡ ತಪ್ಪುವುದರಿಂದ ಸುಸ್ಥಿರ ಆದಾಯವನ್ನು ಹೊಂದಬಹುದಾಗಿದೆ ಎಂದು ನೆರದಿರುವ ರೈತರಿಗೆ ಜಮೀನಿನ ಬಾಳೆ ಬೆಳೆಗೆ ಔಷಧಿಯನ್ನು ಸಿಂಪಡಣೆ ಯೊಂದಿಗೆ, ಪ್ರಾತ್ಯಕ್ಷಿಕೆಯನ್ನು ಡ್ರೋನ್ ಪೈಲೆಟ್ ಮಹಾಂತೇಶ್ ತೋರಿಸಿದರು. ಸಮನ್ವಯ ಟ್ರಸ್ಟ್ ನಲ್ಲಿ ಹೆಸರು ನೋಂದಾಯಿಸಿ ಕೊಂಡ ಬಂದ ರೈತರಿಗೆ ರಿಯಾಯಿತಿ ದರದಲ್ಲಿ ದೊರೆಯುತ್ತದೆ ಎಂದು ಪತ್ರಿಕಾ ಪ್ರತಿ ನಿಧಿಗಳಿಗೆ ಮಾಹಿತಿಗಳನ್ನು ವಿವರವಾಗಿ ತಿಳಿಸಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button