ಕೆಸರು ಗದ್ದೆಯಂತಾದ ಬಸ್ಸ್ ಸ್ಟ್ಯಾಂಡ್ ಪ್ರಯಾಣಿಕರ ಪರದಾಟ ಸಾರ್ವಜನಿಕರಿಂದ – ಅಧಿಕಾರಿಗಳಿಗೆ ಕೊನೆಯ ಎಚ್ಚರಿಕೆ.
ಕಲಕೇರಿ ಅ.17

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದಲ್ಲಿರುವ ಬಸ್ ನಿಲ್ದಾಣದ ಪರಿಸ್ಥಿತಿ ನೋಡಿ ಮಳೆ ಬಂದರೆ ಸಾಕು ಬಸ್ ನಿಲ್ದಾಣದ ಒಳಗೆ ಕೆಸರು ಗದ್ದೆ ಇಷ್ಟೆಲ್ಲಾ ಆದರೂ ಯಾವ ಅಧಿಕಾರಿಗಳು ಇದನ್ನು ಈ ಬಸ್ ನಿಲ್ದಾಣದ ಅಧಿಕಾರಿಗಳು ಇಲ್ಲಿವರೆಗೂ ಯಾವ ಅಧಿಕಾರಿಗಳು ಕೂಡ ನೋಡುವ ಪರಿಸ್ಥಿತಿ ಇಲ್ಲ ಅವರಿಗೆ ಹಲವಾರು ಸಲ ಪೇಪರ್ ಸ್ಟೇಟ್ಮೆಂಟ್ ಆಗಿದೆ ಇಲ್ಲಿಯವರಿಗೂ ಯಾವ ಅಧಿಕಾರಿಗಳು ಕೂಡ ಬಂದಿಲ್ಲ ಕಲಕೇರಿ ಬಸ್ ನಿಲ್ದಾಣದ ಪರಿಸ್ಥಿತಿ ಒಳಗೆ ಪ್ರಯಾಣಿಕರಿಗೆ ಹೋಗುವಂತಿಲ್ಲ ಏಕೆಂದರೆ ಮಳೆ ಬಂದರೆ ಸಾಕು ಕಲಕೇರಿ ಬಸ್ ನಿಲ್ದಾಣ ಕೆಸರುಗದ್ದೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಹೆಚ್ಚಿಸಿಕೊಂಡು ಈ ಬಸ್ ನಿಲ್ದಾಣದ ಒಳಗೆ ಸಿಸಿ ರಸ್ತೆ ಮಾಡಬೇಕು ಇಲ್ಲದಿದ್ದರೆ ಬಸ್ ನಿಲ್ದಾಣದ ಒಳಗೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ದಿಗ್ವಿಜಯ ಭಾರತ ಪಕ್ಷದ ಕರ್ನಾಟಕ ಜಿಲ್ಲಾ ಅಧ್ಯಕ್ಷರಾದ ಮೈಬೂಬಬಾಷ ಮನಗೂಳಿ ಇವರು ಈ ಸಂದರ್ಭದಲ್ಲಿ ತಿಳಿಸಿದರು.

ಈಗಾಗಲೇ ಹಲವಾರು ಸಲ ಅಧಿಕಾರಿಗಳಿಗೆ ಪತ್ರಿಕೆಯಲ್ಲಿ ತಿಳಿಸಿದ್ದೇವೆ ಇಲ್ಲಿಯವರೆಗೂ ಯಾವ ಅಧಿಕಾರಿಗಳು ಕೂಡ ಕಲಕೇರಿಯ ಬಸ್ ನಿಲ್ದಾಣದ ಬಗ್ಗೆ ಯಾವ ಅಧಿಕಾರಿಗಳು ಕೂಡ ಇಲ್ಲಿಗೆ ಬಂದಿಲ್ಲ ಈಗಲಾದರೂ ಇದಕ್ಕೆ ಸಂಬಂಧಪಟ್ಟ ತಾಳಿಕೋಟಿ ಡಿಪೋದ ಅಧಿಕಾರಿಗಳು ವಿಜಯಪುರ ಜಿಲ್ಲೆಯ ಅಧಿಕಾರಿಗಳು ಬೇಗನೆ ಇದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಮುಂದೈತಿ ಮಾರಿಹಬ್ಬ ಅಂತಾ ಸಾರ್ವಜನಿಕ ವಲಯಗಳಲ್ಲಿ ಪಿಸು ಮಾತುಗಳಿಂದ ಕೇಳಿ ಬರುತ್ತಿವೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ