ಪದವಿ ಪ್ರವೇಶ 3. ಸೆಮಿಸ್ಟರ್ ಹಾಗೂ 5. ಸೆಮಿಸ್ಟರ್ ಶುಲ್ಕ ಕಡಿತ ಮಾಡಲು – ಒತ್ತಾಯಿಸಿ ಮನವಿ.
ಹೊಸಪೇಟೆ ಅ.20

ಭಾರತ ವಿದ್ಯಾರ್ಥಿ ಫಡರೇಷನ್(ಎಸ್.ಎಫ್.ಐ) ಕಾಲೇಜುಗಳಲ್ಲಿ ಪ್ರತಿ ವರ್ಷದ ಹಾಗೆ ಈ ವರ್ಷವೂ ಮೂರನೇ ಸೆಮಿಸ್ಟರ್ ಹಾಗೂ ಐದು ನೇ ಸೆಮಿಸ್ಟರ್ ಪದವಿ ಕೋರ್ಸ್ ಆರಂಭದಲ್ಲಿ, ವಿದ್ಯಾರ್ಥಿಗಳಿಂದ ಸರ್ಕಾರಿ ಶುಲ್ಕದ ಜೊತೆಯಲ್ಲಿ ಕಾಲೇಜು ಆಡಳಿತ ಮಂಡಳಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದರ ವಿರುದ್ಧ ಭಾರತ ವಿದ್ಯಾರ್ಥಿ ಫೆಡರೇಶನ್ (S.F.I) ಖಂಡಿಸುತ್ತದೆ.ಬಡ ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿಗಳು ಪದವಿ ಪ್ರವೇಶ ಮಾಡುವುದು ಅಥವಾ ಬೇಡುವುದು ಎನ್ನುವ ಗೊಂದಲದಲ್ಲಿ ವಿದ್ಯಾರ್ಥಿಗಳು ಇದ್ದಾರೆ.

ಕಾಲೇಜು ಆಡಳಿತ ಮಂಡಳಿ ಮನ ಬಂದಂತೆ ಶುಲ್ಕವನ್ನು ಹಾಕಿದರೆ ವಿದ್ಯಾರ್ಥಿಗಳು ಶಿಕ್ಷಣ ದಿಂದ ವಂಚಿತರಾಗಿದ್ದಾರೆ. ಇದನ್ನು ನೋಡಿದರೆ ಆಡಳಿತ ಹಣಕ್ಕಾಗಿ ನಡಿತಿದೆ. ವಿದ್ಯಾರ್ಥಿಗಳ ಪರವಾಗಿ ಇಲ್ಲ ಎಂದು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದೆ. ಹೆಸರಾಂತ ಶಿಕ್ಷಣ ಸಂಸ್ಥೆಯ ಈ ನಡೆಯನ್ನು S.F.I ವಿಜಯನಗರ ಜಿಲ್ಲೆ ಸಮಿತಿ ಖಂಡಿಸುತ್ತದೆ.ಬೇಡಿಕೆಗಳು 1)ವಿಶ್ವವಿದ್ಯಾಲಯದ ಶುಲ್ಕವನ್ನು ಪಡೆಯಬೇಕು.2) ಪ್ರವೇಶ ಅರ್ಜಿಯ ಶುಲ್ಕವನ್ನು ಕಡಿತ ಮಾಡಬೇಕು.3) ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಡೊನೇಷನ್ ಪಡೆಯ ಬಾರದು ಎಂದು ಒತ್ತಾಯಿಸುತ್ತಿದೆ ಇಂಚಾರ್ಜ್ ಪ್ರಾಂಶುಪಾಲ ನಾಗರಾಜ್ ಸರ್ ಅವರಿಗೆ ಮನವಿ ಪತ್ರವನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಮುಖಂಡರುಗಳಾದ ಶಿವಾರೆಡ್ಡಿ, ಕೆ.ಎ. ಪವನ ಕುಮಾರ್ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ