ಎಸ್.ಸಿ ಕೇರಿಯಲ್ಲಿ ಹದಗೆಟ್ಟ ರಸ್ತೆ ಗಮನ ಹರಿಸಿದ ಅಧಿಕಾರಿಗಳು.
ಮುಳಸಾವಳಗಿ ಅ.20

ಕರ್ನಾಟಕ ಸರ್ಕಾರ ಹಳ್ಳಿಗಳು ಅಭಿವೃದ್ಧಿಗಾಗಿ ಗ್ರಾಮ ಪಂಚಾಯತಿ ನಿರ್ಮಿಸಿದೆ ಆದರೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರು, ಸದಸ್ಯರು ಅಭಿವೃದ್ಧಿ ಮಾಡಲು ಅವಕಾಶ ಇದ್ದರು ಮಾಡುವುದಿಲ್ಲ, ಹಳ್ಳಿಯ ಮತದಾರರ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾರೆ.

ದೇವರ ಹಿಪ್ಪರಗಿ ತಾಲ್ಲೂಕಿನ ಮುಳಸಾವಳಗಿ ಗ್ರಾಮ ಪಂಚಾಯತಿ ಇದ್ದರು. ಗ್ರಾಮಕ್ಕೆ ಅಭಿವೃದ್ಧಿಇಲ್ಲ ಗ್ರಾಮದ ಎಸ್.ಸಿ ಓಣಿಯಲ್ಲಿ ಸಾರ್ವಜನಿಕರಿಗೆ ವಾಸ ಮಾಡಲು ಆಗುತ್ತಿಲ್ಲ, ಮನೆಯ ಮುಂದೆ ರಸ್ತೆ ನೀರು ಚರಂಡಿ ನೀರು ನದಿಯ ಹಾಗೆ ಹರಿಯುವುದು, ಸಣ್ಣ ಮಕ್ಕಳಿಗೆ ಮಲೇರಿಯಾ ಕಾಲರಾ ಮುಂತಾದ ರೋಗ ಬರುವ ಸಾದ್ಯತೆ ಇದೆ ಇಷ್ಟು ದಿನ ಆದರೂ ಒಬ್ಬನೇ ಒಬ್ಬ ಅಧಿಕಾರ ಆಗಲಿ, ಮತ್ತು ಅಧ್ಯಕ್ಷರು, ಸದಸ್ಯರು ಈ ಕಡೆ ಗಮನ ಹರಿಸಿಲ.

ಮನೆಗಳ ಮುಂದೆ ಗಬ್ಬು ವಾಸನೆಯಿಂದ ಊಟ ಮಾಡಲು, ನಿದ್ರೆ ಮಾಡಲು ಆಗುತ್ತಿಲ್ಲ, ನಮ್ಮ ಓಣಿಗೆ ಬಂದು ನಮ್ಮ ಸಮಸ್ಯೆಗಳನ್ನು ಬಗೆ ಹರಿಸದ್ದಿದರೆ, ಗ್ರಾಮ ಪಂಚಾಯತಿಗೆ ಬೀಗ್ ಹಾಕೀ ಪ್ರತಿಭಟನೆ ಮಾಡಬೇಕಾಗುತ್ತದೆ, ಎಂದು ದಲಿತ ಮುಖಂಡರು ಹಾಗೂ ಮಹಿಳೆಯರು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ