ನಾಗಲಾಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಾರ್ಯಕ್ರಮ ಜರುಗಿತು.
ಹೊಸಪೇಟೆ ಅ.22

ಗ್ರಾಮದಲ್ಲಿ ಪರಮ ಪೂಜ್ಯ ಡಾ, ವೀರೇಂದ್ರ ಹೆಗ್ಗಡೆ ಅವರು ಮಂಜೂರಾತಿ ನೀಡಿರುವ ಮಾಶಾಸನ ಪಲಾನುಭವಿಯಾದ ಮಲ್ಲಮ್ಮರವರ ವಾಸ್ತಲ್ಯ ಮನೆ ರಚನೆಗೆ ಭೂಮಿ ಪೂಜೆಯನ್ನು ಸಂಸ್ಥೆಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ಸರ್ ಅವರು ಗುದ್ದಲಿ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಿದರು, ನಂತರ ಮಾತನಾಡಿದ ಅವರು ಯಾರು ತಮ್ಮ ಜೀವನದಲ್ಲಿ ತುಂಬಾ ನಿರ್ಗತಿಕ ರಾಗಿದ್ದಾರೋ, ದುಡಿಯಲು ಅಸಮರ್ತ ರಾಗಿದ್ದಾರೋ, ಅಥವಾ ಅನಾಥ ರಾಗಿದ್ದಾರೊ ಅಂತವರ ಬಾಳಲ್ಲಿ ಬೆಳಕು ಚೆಲ್ಲುವ ಕಾರ್ಯಕ್ರಮವೇ ಮಾಶಾಸನ ಕಾರ್ಯಕ್ರಮ ಈ ಕಾರ್ಯಕ್ರಮದ ಅಡಿಯಲ್ಲಿ ಕರ್ನಾಟಕದಾದ್ಯಂತ ಹತ್ತು ಸಾವಿರಕ್ಕೂ ಅಧಿಕ ಹಾಗೂ ಹೊಸಪೇಟೆ ಯೋಜನಾ ವ್ಯಾಪ್ತಿಯಲ್ಲಿ 28 ಫಲಾನುಭವಿಗಳಿಗೆ ಪ್ರತಿ ತಿಂಗಳು 1000/-ರೂ ಮಾಶಾಸನ ಅವರ ಮನೆ ಬಾಗಿಲಿಗೆ ತಲುಪುತ್ತಿದೆ ವಿಶೇಷ ಅಂದರೆ ಯಾವುದೇ ಮಧ್ಯವರ್ತಿಗಳ ಅಡೆ ತಡೆ ಇಲ್ಲದೆ ನೇರವಾಗಿ ಫಲಾನುಭವಿಗೆ ತಲುಪುವ ಕಾರ್ಯಕ್ರಮ. ಅದೇ ರೀತಿಯಾಗಿ ಮಾಶಾಸನ ಪಡೆಯುತ್ತಿರುವಂತಹ ಯಾವ ಫಲಾನುಭವಿಗೆ ವಾಸಿಸಲು ಆಶ್ರಯ ಇಲ್ಲವೋ ಅಂತಹ ಫಲಾನುಭವಿಗೆ ಸೂರು ಕಲ್ಪಿಸುವ ಯೋಜನೆಯ ವಾತ್ಸಲ್ಯ ಕಾರ್ಯಕ್ರಮ ಈ ಕಾರ್ಯಕ್ರಮದ ಅಡಿಯಲ್ಲಿ ಈಗಾಗಲೇ ರಾಜ್ಯದಲ್ಲಿ 950 ಕ್ಕೂ ಅಧಿಕ ಮನೆ ನಿರ್ಮಿಸಲಾಗಿದೆ ನಮ್ಮ ಹೊಸಪೇಟೆ ಯೋಜನಾ ವ್ಯಾಪ್ತಿಯಲ್ಲಿ ಇದು 4 ನೇ ಮನೆ ರಚನೆಯಾಗುತ್ತಿದೆ ಈ ಸಮಾಜದಲ್ಲಿ ಯಾರು ಅನಾಥರಲ್ಲ ಎಲ್ಲರೂ ಭೂಮಿಯ ಮೇಲೆ ಬದುಕಲಿಕ್ಕೆ ಅರ್ಹರು ಎಂದು ತೋರಿಸಿ ಕೊಳ್ಳುವುದೇ ಈ ಯೋಜನೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅಂಜಿನಪ್ಪ, ಶಂಕ್ರಣ್ಣ, ಹನುಮಂತಮ್ಮ್, ತಾಲೂಕಿನ ಮಾನ್ಯ ಯೋಜನಾಧಿಕಾರಿಯಾದ ಮಾರುತಿ ಸರ್ ವಲಯದ ಮೇಲ್ವಿಚಾರಕ ನಂದನ್ ಕುಮಾರ್ ಜ್ಞಾನ ವಿಕಾಸ ಸಮನ್ವಯಾಧಿಕಾರಿ ರೇಖಾ ಸೇವಾ ಪ್ರತಿನಿಧಿ ಕಲಾವತಿ ಮತ್ತು ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ