ಶಾಲಾ ವಾಹನ ಚಾಲಕನನ್ನು ಗುರುತಿಸಿದ – ತಾಲೂಕ ಆಡಳಿತ.
ಇಲಕಲ್ಲ ನ.01

ಮಾರ್ಗದರ್ಶನ ಶಿಕ್ಷಣ ಸಂಸ್ಥೆಯ ಬಸ್ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶರಣಪ್ಪ.ಭೀಮಪ್ಪ ಗಿರಡ್ಡಿ ರವರನ್ನು ಗುರುತಿಸಿದ ತಾಲೂಕ ಆಡಳಿತ ತಾಲೂಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ದೇಶದ ಪ್ರಜೆಗಳಾಗಿ ಬೆಳೆಯುತ್ತಿರುವ ಮಕ್ಕಳ ಸೇವೆ ಮಾಡುತ್ತಾ ಪ್ರತಿ ದಿನ ಮನೆಯಿಂದ ಶಾಲೆಗೆ ಶಾಲೆಯಿಂದ ಮನೆಗೆ ಪರರ ಮಕ್ಕಳಾದರೂ ತಮ್ಮ ಮಕ್ಕಳು ಮೊಮ್ಮಕ್ಕಳು ಎನ್ನುವ ಭಾವನೆಯಿಂದ ಹಾರೈಕೆ ಮಾಡುತ್ತಾ ಸುರಕ್ಷಿತವಾಗಿ ಮನೆ ಮತ್ತು ಶಾಲೆಗೆ ಮುಟ್ಟಿಸುವ ಕಾರ್ಯ ಮಾಡುತ್ತಿರುವ ಶರಣಪ್ಪನವರು ಸುಮಾರು 40 ವರ್ಷಗಳಿಂದ ಬಸ್ ವಾಹನ ಚಾಲಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಶಾಲಾ ವಾಹನ ಚಾಲಕರಿಗೆ ಕಡಿಮೆ ಸಂಬಳವಾದರೂ ಚಿಂತೆ ಇಲ್ಲ ಮಕ್ಕಳ ಸೇವೆ ಮಾಡ ಬೇಕೆನ್ನುವ ಹಂಬಲ ಮಹಾ ದಾಶೆಯಿಂದ ಅಲ್ಪ ಸಂಬಳದಲ್ಲಿಯೇ ದುಡಿಯುತ್ತ ಮಕ್ಕಳ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ನಂಬಿರುವ ಶರಣಪ್ಪನವರು ಈ ಮೊದಲು ಹಾಲಕೆರೆ ಮುಧೋಳ ನರೇಗಲ್ಲ ಗಜೇಂದ್ರಗಡ ಸೇವೆ ಸಲ್ಲಿಸಿ ಪ್ರಸ್ತುತ ಇಳಕಲ್ ನ ಮಾರ್ಗದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಾ ಸೇವೆ ಉದ್ದಕ್ಕೂ ಕಪ್ಪು ಚುಕ್ಕಿ ಬರದ ಹಾಗೆ ಒಂದು ಸಣ್ಣ ಅಪಘಾತವು ಆಗದಂತೆ ಜಾಗೃತ ದಿಂದ ಮಕ್ಕಳನ್ನು ದೇವರೆಂದು ನಂಬಿ ಸೇವೆ ಮಾಡುತ್ತಾ ಬಂದಿದ್ದರು ಅದರ ಪ್ರತಿ ಫಲವಾಗಿ ಇವತ್ತು ರಾಜ್ಯೋತ್ಸವ ಪ್ರಶಸ್ತಿ ನನ್ನ ಪತಿಗೆ ಬಂದಿರುವುದು ನಮ್ಮ ಭಾಗ್ಯ ಎಂದು ಚಾಲಕರ ಪತ್ನಿ ಚನ್ನಮ್ಮ ಶರಣಪ್ಪ ಗಿರಡ್ಡಿಯವರು ಖುಷಿಯಿಂದ ಮಾತುಗಳನ್ನು ಹೇಳಿದರು.