ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ – ಯಶಸ್ವಿಯಾಗಿ ನೆರವೇರಿತು.
ಕಲಕೇರಿ ನ.01

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ನಗರದಲ್ಲಿ ನಡೆದಂತೆಹ 69 ನೇ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಭಾರತಾಂಬೆಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಕನ್ನಡ ಧಜಾರೋಹಣ ಮಾಡಿ ಸಿಹಿ ಹಂಚಿ ಸಂಭ್ರಮ ಆಚರಣೆ ಮಾಡಿದ ಕನ್ನಡ ಅಭಿಮಾನಿಗಳು. ಇತ್ತೀಚಿಗೆ ರಾಜ್ಯ ಮಟ್ಟದ ಸಿರಿ ಕನ್ನಡ ಸಿರಿ ಪ್ರಶಸ್ತಿ ವಿಜೇತರು, ವರದಿಗಾರರು, ರೈತ ಸಂಘದ ಜಿಲ್ಲಾಧ್ಯಕ್ಷರು ಸಂಗಮೇಶ ಸಗರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತಾನಾಡಿದ ಸಂಗಮೇಶ ಸಗರ ಅವರು ನಾಡಿನ ಮಾತೃ ಭಾಷೆ ನೆಲ ಜಲ ಉಳಿವಿಗಾಗಿ ಎಲ್ಲರೂ ಅಂದಾಗ ಮಾತ್ರ ಈ ನಾಡು ನೆಲ ಜನ ಎಲ್ಲರೂ ಸಂತೋಷ ದಿಂದ ಇರಬಹುದು. ಕಲಕೇರಿ ಭಾಗದಲ್ಲಿ ರೈತರಿಗೆ ನೂರಾರು ಸಮಸ್ಯೆಗಳು ಎದ್ದು ಕಾಣುತ್ತಿದ್ದು ಕುಡಿಯಲು ನೀರು, ಕೃಷಿಗೆ ನೀರು ಧನ ಕರುಗಳಿಗೆ ನೀರು ಕಾಲುವೆ ದುರಸ್ತಿ ಪಶು ಆಸ್ಪತ್ರೆ ರೈತರಿಗೆ ಪ್ರತಿ ನಿತ್ಯ ನೂರಾರು ಸಮಸ್ಯೆಗಳು ಕಾಡುತ್ತಿದ್ದು ಅದಕ್ಕಾಗಿ ರೈತ ಸಂಘಟನೆಯರು ಇತ್ತ ಕಡೆ ಚಿತ್ತ ವಹಿಸಬೇಕಾಗಿದೆ. ಜೊತೆಗೆ ಕಲಕೇರಿ ಸುತ್ತ ಮುತ್ತಲೂ ಕೂಡ ಈ ಒಂದು ಸಂಘಟನೆ ಜಾಗೃತ ವಹಿಸಿರಿ ರೈತರು ನಿಮ್ಮೊಂದಿಗೆ ಮಾತ್ರ ಎಲ್ಲರು ಒಂದು ಹೊತ್ತಿನ ಊಟ ಮಾಡಬಹುದು ಎಂದರು.

ನಿವೃತ್ತ ಶಿಕ್ಷಕರದ ಶಾಂತಗೌಡ ಬಿ ಪಾಟೀಲ್ ಶಿಕ್ಷಕರು ಮಾತನಾಡುತ್ತ ದೊಡ್ಡ ಶಕ್ತಿ ಇದೆ ಅದಕ್ಕಾಗಿ ಎಲ್ಲರೂ ಸಂಘಟಿಕರಾಗಿ ವಿಭಾಗದ ಪ್ರತಿಯೊಬ್ಬರ ಯುವ ಮನಸ್ಸುಗಳು ತಯ್ಶಾರಿಸುವಂತಾಗ ಬೇಕು ಎಂದರು.ಈ ವೇಳೆ ಶ್ರೀಮತಿ ಜಗದೇವಿ ಗಣಾಚಾರಿ ಅಧ್ಯಕ್ಷರು ಉಪಾಧ್ಯಕ್ಷರು ನಿರ್ಮಲ ಹಿರೇಮಠ್. ಶರಣಪ್ಪ ಮೋಪಗಾರ. ಎಸ್ ಬಿ ಪಾಟೀಲ್. ಇರಗಂಟೆಪ್ಪ ಮೋಪಗಾರ. ಪ್ರವೀಣ್ ಜಗ ಶೆಟ್ಟಿ. ಪ್ರಕಾಶ್ ಯರನಾಳ. ಮಡಿವಾಳಪ್ಪ ತಳವಾರ್. ಸಾಹೇಬ್ ಗೌಡ ಸಾಸನೂರ್. ಸಿದ್ದು ಪೂಜಾರಿ. ವಾಗೀಶ್ ನಾಗಟಾಣ. ಶಿವು ಪಟಶೆಟ್ಟಿ. ರಮೇಶ್ ಹೊಸಮನಿ. ರಮೇಶ್ ಹೆಂಡಿ. ಮಲ್ಲನಗೌಡ ಬಿರಾದಾರ್. ಈರಯ್ಯ ಚಿಕ್ಕಮಠ್. ಡಿ.ಎನ್. ಚಿಕ್ಕಮಠ.ಶಿವು ಸಜ್ಜನ್. ಯಲಗೂರಪ್ಪ ವಡವಡಿಗಿ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ