ಶ್ರೀ ಕರಿಯಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ – ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ 1 ಲಕ್ಷ ರೂ ಸಹಾಯ.
ಹೊಸಪೇಟೆ ಜ.28

ಹೊಸಪೇಟೆ ತಾಲೂಕಿನ ರಾಜಪುರ ಗ್ರಾಮದಲ್ಲಿ ಶ್ರೀ ಕರಿಯಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಮ ಪೂಜ್ಯ ಡಾ, ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರಸಾದ ರೂಪದಲ್ಲಿ 1 ಲಕ್ಷ ರೂ ಮಂಜೂರು ಮಾಡಿದ್ದು ಈ ಮೊತ್ತದ ಡಿ.ಡಿ ಯನ್ನು ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ಶೆಟ್ಟಿ ಅವರು ದೇವಸ್ಥಾನದ ಕಮೀಟಿಯ ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಾವ ಊರಿನಲ್ಲಿ ದೇವಸ್ಥಾನಗಳು ಚೆನ್ನಾಗಿರುತ್ತವೆಯೋ ಆ ಊರಿನಲ್ಲಿ ಉತ್ತಮ ಸಂಸ್ಕಾರ ಇರುತ್ತದೆ ಮನುಷ್ಯನಿಗೆ ಹಾಗೂ ಸಕಲ ಜೀವ ರಾಶಿಗಳಿಗೆ ಏನಾದರೂ ತೊಂದರೆ ಯಾದಾಗ ಮೊದಲು ನೆನೆಯೋದೇ ದೇವರನ್ನು ಹಾಗಾಗಿ ನಮ್ಮನ್ನು ಕಾಪಾಡುವ ಆ ದೇವರಿಗೆ ಒಂದು ಉತ್ತಮವಾದ ಮಂದಿರವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಆದರೆ ಇಂತಹ ಗುಡಿಗಳನ್ನು ನಿರ್ಮಾಣ ಮಾಡುವುದು ಯಾವುದೇ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ ಅದಕ್ಕೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಆ ಕಾರ್ಯ ಪೂರ್ಣ ಗೊಳ್ಳುತ್ತದೆ ಇದನ್ನು ಮನಗಂಡಂತಹ ಪೂಜ್ಯರು ಕ್ಷೇತ್ರದ ವತಿಯಿಂದ ದೇಣಿಗೆ ನೀಡುವಂತಹ ಮಹತ್ಕಾರ್ಯವನ್ನು ಮಾಡುತ್ತಿದ್ದು ಇಂತಹ ಭಕ್ತಿ ತುಂಬಿದ ಕಾರ್ಯಕ್ರಮಗಳಿಗೆ ತಾವೆಲ್ಲರೂ ಕೈಜೋಡಿಸ ಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ತಾಲೂಕಿನ ಯೋಜನಾಧಿಕಾರಿ ಶ್ರೀ ಮಾರುತಿ ಎಸ್ ಕಮಿಟಿಯ ಅಧ್ಯಕ್ಷರಾದ ಶ್ರೀ ನಾಗೇಂದ್ರಪ್ಪ, ಉಪಾಧ್ಯಕ್ಷರಾದ ಶ್ರೀ ಬರಮಪ್ಪ, ಕಾರ್ಯದರ್ಶಿಗಳಾದ ಶ್ರೀ ಯರ್ರೀಸ್ವಾಮಿ, ಹಿರಿಯರಾದ ತಿಪ್ಪೇಸ್ವಾಮಿ, ಶ್ರೀ ಮಂಜುನಾಥ, ಕಣಿವೆಪ್ಪ, ರಾಮಾಂಜನಿ, ಶ್ರೀ ಮಲ್ಲಪ್ಪ, ಸುಧಾ, ವಲಯದ ಮೇಲ್ವಿಚಾರಕ ರಘು, ಕೃಷಿ ಅಧಿಕಾರಿ ಶ್ರೀ ಚನ್ನಪ್ಪ, ಸೇವಾ ಪ್ರತಿನಿಧಿಗಳಾದ ಶ್ರೀಮತಿ ರೇಣುಕಾ, ಭಾಗ್ಯಜ್ಯೋತಿ, ಒಕ್ಕೂಟದ ಪದಾಧಿಕಾರಿಗಳು ಸ್ವಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಾಲತೇಶ್.ಶೆಟ್ಟರ್.ಹೊಸಪೇಟೆ