“ಜನ್ಮಧಾತರು ಸಮಯಕ್ಕಾದವನು ಪ್ರತ್ಯಕ್ಷ ದೇವರು”…..

ತಾಯಿಯೇ ದೇವರು ತಂದೆಯೇ ನಿಜ ಬಂಧು
ಪ್ರಸ್ತುತ ವಿದ್ಯಾ ಸಿರಿ ಸವಲತ್ತುಗಳ ಆಸರೆ
ಬದುಕು ಆನಂದ ಗೌರವ ಸನ್ಮಾನ
ಸ್ನೇಹಿತರು ಹಿತವರು ಹಾಡಿ ಹೊಗಳಲು
ಮಹೋನ್ನತ ಜೀವನ ಆನಂದೋತ್ಸವದ
ಹರುಷ
ಉಲ್ಲಾಸವು ಕುಟುಂಬ ಸಮೇತ ಜೀವನ
ಸಾಗಿಹ ಬದುಕು
ಅಪರಂಜಿತನಕೆ ಹೆತ್ತ ಹೊತ್ತ ಕರುಣೆ
ತ್ಯಾಗ ಪ್ರೀತಿ ನಿಸ್ವಾರ್ಥ ಫಲ ಎಮಗೆ
ದೊರಕಿಸಿದವರ
ಗೌರವ ಭಾವಕ್ಕೆ ದಕ್ಕ ತರದೇ ನಡೆದು
ಪಾಲಿಸೋಣ
ಮಹಾತ್ಮರ ಸೇವೆ ಗೈದು ಜೀವನ ಪಾವನಕ್ಕಾಗಿ
ಬದುಕು ಸಾಗಿಸೋಣ
ನಮ್ಮ ಬದುಕು ನಮ್ಮ ಹೆಮ್ಮೆ
ಜಗದಿ ಆದರ್ಶತನದ ಬಿತ್ತಿ ಬೆಳೆಯೋಣ
ಜನ್ಮಧಾತರು ಸಮಯಕ್ಕಾದವನು ಪ್ರತ್ಯಕ್ಷ
ದೇವರು
ಸದಾ ನಮಗೆ ಕೃಪೆ ಕ್ಷಣ ಕ್ಷಣವು ನೆನಹು ನಮಗೆ
ಶುಭ ಲಾಭ
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ..