ಯರಗೇರಾ ಸಾಮಾಜಿಕ ಅರಣ್ಯ ಸಸ್ಯ ಕ್ಷೇತ್ರಕ್ಕೆ – ವನಸಿರಿ ತಂಡದ ಸದಸ್ಯರು ಭೇಟಿ.
ಯರಗೇರಾ ಫೆ.03

ರಾಯಚೂರು ತಾಲೂಕಿನ ಯಾರಗೇರಾ ಗ್ರಾಮ ಪಂಚಾಯತ ವ್ಯಾಪ್ತಿಯ ಸಾಮಾಜಿಕ ಅರಣ್ಯ ವಲಯ ಬೆಳಸುತ್ತಿರುವ ಸಸ್ಯ ಕ್ಷೇತ್ರಕ್ಕೆ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು, ವನಸಿರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಹಾಗೂ ತಂಡದ ಸದಸ್ಯರು ಭೇಟಿ ನೀಡಿ ವೀಕ್ಷಣೆ ಮಾಡಿದರು. ಸಾಮಾಜಿಕ ಅರಣ್ಯ ಇಲಾಖೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ವಿವಿಧ ರೀತಿಯ ಸಸ್ಯ ಪ್ರಭೇಧಗಳನ್ನು ಬೆಳಸಿದ ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಮಾತನಾಡಿದ ವನಸಿರಿ ಅಮರೇಗೌಡ ಮಲ್ಲಾಪುರ ಅವರು ರಾಯಚೂರು ಜಿಲ್ಲೆಯಲ್ಲಿ ಹವಾಮಾನ ವೈಪರಿತ್ಯದಿಂದ ಅತೀ ಹೆಚ್ಚು ಬಿಸಿಲಿನ ತಪಮಾನ ದಿಂದ ಕೂಡಿದ್ದು, ರಾಯಚೂರು ಜಿಲ್ಲೆಯಲ್ಲಿ ಅತೀ ಕಡಿಮೆ ಭೂ ಭಾಗವನ್ನು ಹೊಂದಿದೆ. ಇದನ್ನು ಹೆಚ್ಚಿಸುವ ಕುರಿತು ಇತ್ತೀಚೆಗೆ ಅರಣ್ಯ ಸಚಿವರು ಕೂಡಾ ಹೆಚ್ಚು ಕಾಳಜಿ ವಹಿಸಿ 100 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅರಣ್ಯ ಇಲಾಖೆ ನರೇಗಾ ಯೋಜನೆಯಡಿ ವಿವಿಧ ರೀತಿಯ ಸಸ್ಯ ಪ್ರಭೇಧಗಳು ಸೇರಿ ಸುಮಾರು 1800 ಗಿಡಗಳನ್ನು ಬೆಳಸುತ್ತಿರುವುದು ತುಂಬಾ ಶ್ಲಾಘನೀಯ ಕಾರ್ಯ. ಇದರಿಂದ ಸಸ್ಯ ಪ್ರಭೇಧ ತಳಿಗಳು ಹೆಚ್ಚಾಗಲಿವೆ, ಅರಣ್ಯ ಪ್ರದೇಶ ಕೂಡಾ ಹೆಚ್ಚಾಗಲಿದೆ.1800 ಸಸ್ಯಗಳು ತುಂಬಾ ಸುಂದರವಾಗಿ ಬೆಳೆದು ನಿಂತಿವೆ.

ಇವುಗಳನ್ನು ವೀಕ್ಷಣೆ ಮಾಡಿ ನಾವು ಕೂಡಾ ಇಂತಹ ಸಸ್ಯ ಕ್ಷೇತ್ರ ನಿರ್ಮಿಸ ಬೇಕೆನ್ನುವ ಉದ್ದೇಶದಿಂದ ಈ ಸಸ್ಯ ಕ್ಷೇತ್ರ ವೀಕ್ಷಣೆ ಮಾಡಲು ಬಂದಿದ್ದೇವೆ. ಪರಿಸರ ಉಳಿಸಿ ಬೆಳಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಜೊತೆ ವನಸಿರಿ ತಂಡ ಕೂಡ ಸದಾಕಾಲ ಕೈಜೋಡಿಸುತ್ತೇವೆ. ಸರ್ಕಾರ ಕೂಡಾ ಇಂತಹ ಇನ್ನೂ ಹಲವಾರು ಸಸ್ಯ ಕ್ಷೇತ್ರಗಳನ್ನು ನಿರ್ಮಿಸಲು ಅರಣ್ಯ ಇಲಾಖೆಯ ಜೊತೆಗೆ ನಮ್ಮ ವನಸಿರಿ ಪೌಂಡೇಷನ್ ಸಂಸ್ಥೆಗೂ ಅವಕಾಶ ನೀಡಿದಾಗ ಮಾತ್ರ ಕಲ್ಯಾಣ ಕರ್ನಾಟಕ ಬಿಸಿಲು ನಾಡು ಹಸಿರು ನಾಡಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಈ ಸಂಧರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಸುರೇಶ ಬಾಬು, ನಾಗರಾಜ ಉಪ ಅರಣ್ಯ ಅಧಿಕಾರಿ ರಾಯಚೂರು, ವನಸಿರಿ ಪೌಂಡೇಷನ್ ರಾಜ್ಯ ಗೌರವ ಅಧ್ಯಕ್ಷ ಶಂಕರಗೌಡ ಎಲೆಕೊಡ್ಲಿಗಿ,ಗಿರಿಸ್ವಾಮಿ ಹೆಡಗಿನಾಳ ಹಾಗೂ ಅರಣ್ಯ ಸಿಬ್ಬಂದಿಗಳು ಇದ್ದರು.