ಬಹುತತ್ವ ಭಾರತದಲ್ಲಿ ಹಿಂದೂ ಸಂವಿಧಾನ ಜಾರಿಗೆ ತರಲು ಬಿಡುವುದಿಲ್ಲ ಎಂದ – ನಿಡುಮಾಮಿಡಿ ಸ್ವಾಮೀಜಿ.
ಕೂಡಲ ಸಂಗಮ

ಹಂಡೆವಜೀರ್ ಸಮಾಜದ 3 ನೇ. ರಾಜ್ಯಮಟ್ಟದ ಸಮಾವೇಶ. ಉತ್ತರ ಪ್ರದೇಶದ ಪ್ರಯಾಗ ರಾಜದಲ್ಲಿ ನಡೆಯುತ್ತಿರುವ ಮಹಾ ಕುಂಭ ವೇಳೆಯಲ್ಲಿ ಹಿಂದೂ ಸಂವಿಧಾನ ಜಾರಿಗೆ ತರುತ್ತೇವೆ ಎಂದು ಕೆಲವರು ಹೇಳುತ್ತಿರುವುದು ಖಂಡನೀಯ. ಬಹುತತ್ವ ಭಾರತದಲ್ಲಿ ಹಿಂದೂ ಸಂವಿಧಾನ ಜಾರಿಗೆ ತರಲು ಬಿಡುವುದಿಲ್ಲ ಎಂದು ನೀಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ದೇಸಿ ಕೇಂದ್ರ ಸ್ವಾಮೀಜಿ ಹೇಳಿದರು. ಕೂಡಲ ಸಂಗಮ ಸಭಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಂಡೆ ವಜೀರ್ ಸಮಾಜದ 3 ನೇ. ರಾಜ್ಯ ಮಟ್ಟದ ಸಮಾವೇಶ ಉದ್ಘಾಟನೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಇಂದು ಸಂವಿಧಾನ ಜಾರಿಯಾದರೆ ದೇಶದಲ್ಲಿನ ಜೈನ. ಬೌದ್ಧ. ಕ್ರಿಸ್ತ. ಮುಸ್ಲಿಂ. ವೀರಶೈವ ಲಿಂಗಾಯತ ಮುಂತಾದ ಧರ್ಮಿನಿಯರು ಎಲ್ಲಿಗೆ ಹೋಗಬೇಕು.

ತಾರತಮ್ಯ ಹೋಗಲಾಡಿಸಿ ಸಮಾನತೆ ಹಕ್ಕು ನೀಡಿದ ನಮ್ಮ ಸಂವಿಧಾನ ಬದಲಾವಣೆಗೆ ನಾಡಿನ ಜನ ಅವಕಾಶ ಕೊಡಬಾರದು. ಪ್ರಜಾಪ್ರಭುತ್ವ ನಾಶಕ್ಕೆ ಹೊರಟವರನ್ನು ವಿರೋಧಿಸುವ ಕಾರ್ಯಾಗಬೇಕು ಎಂದರು. ನಮ್ಮಲ್ಲಿನ ಭಿನ್ನಾಭಿಪ್ರಾಯ ಬಿಟ್ಟು ಒಗ್ಗೂಡಿ ನಡೆದರೆ ಸಮಾಜಕ್ಕೆ ಭವಿಷ್ಯ ಇದೆ ಸಾವಿರಾರು ವರುಷಗಳ ಇತಿಹಾಸವಿರುವ ಧರ್ಮವನ್ನು ಒಡೆಯುವ ಕಾರ್ಯ ಮಾಡದೆ ಎಲ್ಲರನ್ನೂ ಬಳಸಿ ಕೊಂಡು ಧರ್ಮ ಕಟ್ಟುವ ಕಾರ್ಯಾಗಲಿ. ಹಂಡೆ ವಜೀರ್ ಸಮಾಜದ ಹನುಮಪ್ಪ ನಾಯಕನ ಜಯಂತಿಯನ್ನು ಪ್ರತಿವರ್ಷ ಏಪ್ರಿಲ್ 9 ರಂದು ಸರ್ಕಾರಿ ಜಯಂತಿಯಾಗಿ ಆಚರಿಸಬೇಕು.

ಸಮಾಜದ ಟ್ರಸ್ಟಿಗೆ ಸರ್ಕಾರದ ವತಿಯಿಂದ ವಿಜಯಪುರ ಅಥವಾ ಬಾಗಲಕೋಟೆ ಜಿಲ್ಲೆಯಲ್ಲಿ 10 ಎಕರೆ ಭೂಮಿ ನೀಡಬೇಕು. ರಾಜಕೀಯದಲ್ಲಿ ಸಮಾಜದ ಮುಖಂಡರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು. ಸಚಿವ ಶಿವಾನಂದ ಪಾಟೀಲ್ ಸಮಾವೇಶ ಉದ್ಘಾಟಿಸಿ ಮಾತನಾಡಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ವೀರಶೈವ ಲಿಂಗಾಯತರು ಒಗ್ಗಟ್ಟಾಗ ಬೇಕಿದೆ ಹನುಮಪ್ಪ ನಾಯಕನ ಜಯಂತಿಯನ್ನು ಸರ್ಕಾರಿ ಜಯಂತಿ ಯಾಗಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಇಂದಿನ ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ನಮ್ಮ ಸರ್ಕಾರ ಈಡೇರಿಸಲು ಪ್ರಾಮಾಣಿಕ ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು. ಇದೇ ವೇಳೆಯಲ್ಲಿ ಸಾಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಹೊಸಪೇಟೆಯ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಕೊಟ್ಟೂರು ಬಸವಲಿಂಗ ಸ್ವಾಮೀಜಿ. ಲೋಕಸಭಾ ಸದಸ್ಯ. ಪಿ.ಸಿ ಗದ್ದಿಗೌಡರ್ ವಿಧಾನ ಪರಿಷತ್ ಸದಸ್ಯ ಪಿ.ಎಚ್ ಪೂಜಾರ್. ದೇವರ ಹಿಪ್ಪರಗಿ ಶಾಸಕರಾದ ರಾಜುಗೌಡ ಪಾಟೀಲ್. ಹುನಗುಂದ್ ಶಾಸಕರಾದ ವಿಜಯಾನಂದ ಕಾಶಪ್ಪನವರ್. ಮಾಜಿ ಶಾಸಕರಾದ ಎ.ಎಸ್ .ಪಾಟೀಲ್ ನಡಹಳ್ಳಿ ಎಸ್ .ಕೆ ಬೆಳ್ಳುಬ್ಬಿ. ಮತ್ತು ಸಮಾಜದ ಗುರು ಹಿರಿಯರು ಎಲ್ಲಾ ಬಾಂಧವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ