ಜಾನಪದ ಪರಿಷತ್ – ಪದಗ್ರಹಣ ಕಾರ್ಯಕ್ರಮ.
ಗೊರನಾಳ ಫೆ.04

ಕನ್ನಡ ಜಾನಪದ ಪರಿಷತ್ತು ಬೆಂಗಳೂರು, ಜಾನಪದ ಪರಿಷತ್ತು ವಿಜಯಪುರ ಇವರ ಅಡಿಯಲ್ಲಿ ಬರುವ ಇಂಡಿ ತಾಲೂಕ ಜಾನಪದ ಪರಿಷತ್ತಿನ ತಾಲೂಕ ಘಟಕದ ಉದ್ಘಾಟನಾ ಸಮಾರಂಭವನ್ನು ಪಿ.ಎಮ್. ಶ್ರೀ ಸರಕಾರಿ ಪ್ರೌಢ ಶಾಲೆ ಗೊರನಾಳದಲ್ಲಿ ಹಮ್ಮಿಕೊಳ್ಳಲಾಗಿತ್ತು,ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಹಾಗೂ ಸಾನಿಧ್ಯವನ್ನು ಶ್ರೀ ಷ.ಬ್ರ. ಅಭಿನವ ಮುರುಘೇಂದ್ರ ಶಿವಾಚಾರ್ಯರು ಶಿರಶ್ಯಾಡ ಪೂಜ್ಯರು ವಹಿಸಿದ್ದರು. ಉದ್ಘಾಟನೆಯನ್ನು ಡಾ, ಎಸ್.ಬಾಲಾಜಿ ನೆರವೇರಿಸಿ ‘ಜಾನಪದ ಅಳಿವಿನ ಅಂಚಿನಲ್ಲಿರುವ ಕಲೆಯಲ್ಲ ಬದಲಾಗಿ ಅದು ತಲೆ ಮಾರಿನಿಂದ ತಲೆಮಾರಿಗೆ ಬದಲಾಗುತ್ತಿದೆ, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಯುವಕರ ಮೇಲಿದೆ’ ಎಂದರು. ಇಂಡಿ ತಾಲೂಕಿನ ಕನ್ನಡ ಜಾನಪದ ಪರಿಷತ್ತಿನ ಗೌರವ ಅಧ್ಯಕ್ಷರಾಗಿ ಶ್ರೀ ಅಭಿನವ ಮುರುಗೇಂದ್ರ ಶಿವಾಚಾರ್ಯರು ವಹಿಸಿ ಕೊಂಡರು, ನಂತರ ಮಾತನಾಡಿದ ಅವರು ‘ವಿದ್ಯಾರ್ಥಿಗಳೆಲ್ಲರೂ ತಮ್ಮ ತಮ್ಮ ಹಳ್ಳಿಯಲ್ಲಿ ಕಂಡು ಬರುವ ಅನಕ್ಷರಸ್ಥರ ಜಾನಪದ ಕಲೆಯನ್ನು ಉಳಿಸುವ ಹೊಣೆಯನ್ನು ಹೊರಬೇಕು’ ಎಂದರು. ತಾಲೂಕ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಶ್ರೀ ಪಂಡಿತ್.ಬಿ ಅವಜಿಯವರು ‘ಜಾನಪದವು ಜನರ ಜೀವನದಲ್ಲಿ ಹಾಸು ಹೊಕ್ಕಾಗಿದೆ, ಅದು ಎಂದಿಗೂ ಅಳಿಯುವುದಿಲ್ಲ’ ಎಂದರು. ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಜಟ್ಟೆಪ್ಪ ಎಸ್ ಮಾದರ ಪದಗ್ರಹಣ ಮಾಡಿದರು.

ಖಜಾಂಚಿಯಾಗಿ ಶ್ರೀ ಮಲ್ಲಿಕಾರ್ಜುನ ಸುಪನೂರ, ಜಂಟಿ ಕಾರ್ಯದರ್ಶಿಯಾಗಿ ಸುಭಾಸಚಂದ್ರ ನಾವಿ,ಪತ್ರಿಕಾ ಕಾರ್ಯದರ್ಶಿಯಾಗಿ ಖಾಜು ಸಿಂಗೇಗೋಳ, ಸಂಘಟನಾ ಕಾರ್ಯದರ್ಶಿಯಾಗಿ ಸರದಾರ ಮುಲ್ಲಾ,ಸಂಚಾಲಕರಾಗಿ ಶ್ರೀ ಸಾಗರ ಮಾನೆ,ಶ್ರೀಮತಿ ಗೀತಾ ಹತ್ತಳ್ಳಿ,ಶ್ರೀಮತಿ ಪಾರ್ವತಿ ಸೊನ್ನದ,ಶ್ರೀ ತುಳಜಾರಾಮ ನಾಟಿಕಾರ,ಶ್ರೀ ಸುಭಾಷ ಕಾಮಾ, ಶ್ರೀ ಸುರೇಶ ಚವ್ಹಾಣ, ಶ್ರೀ ಸಿ.ಎಸ್. ಮೇತ್ರಿ ಸದಸ್ಯರಾಗಿ ಪದಗ್ರಹಣ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಮಹೇಂದ್ರ ಜಾದವ್, ಶ್ರೀ ವಿಜಯ ಸರ್ ಬೆಂಗಳೂರು ಭಾಗವಹಿಸಿದ್ದರು , ಶ್ರೀಮತಿ ದಾಕ್ಷಾಯಿಣಿ ಬಿರಾದಾರ ಇವರನ್ನು ವಿಜಯಪುರ ಜಿಲ್ಲಾ ಮಹಿಳಾ ಜಾನಪದ ಪರಿಷತ್ತಿನ ಅಧ್ಯಕ್ಷರನ್ನಾಗಿ ರಾಜ್ಯಾಧ್ಯಕ್ಷರಾದ ಡಾ, ಎಸ್.ಬಾಲಾಜಿ ಅವರು ಘೋಷಿಸಿದರು. ಶ್ರೀ ಆನಂದ್ ಕೆಂಭಾವಿ, ಶ್ರೀ ನಿವಾಸರಾಜ ಜಮಾದಾರ, ಶ್ರೀ ವೀರಣ್ಣ ನಾಯ್ಕೋಡಿ, ಶ್ರೀ ಎಂ ಪಿ ಚಿಮ್ಮಾಗೋಳ, ಶ್ರೀ ಎಂ.ಎಂ. ವಾಲಿಕಾರ, ಶ್ರೀ ವೈ.ಟಿ ಪಾಟೀಲ, ಹಾಗೂ ಸುತ್ತಮುತ್ತಲ ಗ್ರಾಮದ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗೊಂದಳಿ ಕಲಾವಿದರು, ಚೌಡಕಿ ಪದಗಳು, ಭಜನಾ ಕಲಾ ತಂಡಗಳು ಭಾಗವಹಿಸಿದ್ದವು. ಕುಮಾರಿ ಮಾಯವ್ವ ಹಂಜಗಿ ಪ್ರಾರ್ಥಿಸಿದರು, ಶ್ರೀ ಜಟ್ಟೆಪ್ಪ ಮಾದರ ನಿರೂಪಿಸಿದರು, ಶ್ರೀ ತುಕಾರಾಮ ಸೂರ್ಯವಂಶಿ ವಂದಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ.ವಿಜಯಪುರ