ವಿದ್ಯಾರ್ಥಿಗಳು ತಮ್ಮ ಜೀವನವನ್ನು ಉತ್ತಮ – ಪಡಿಸಿ ಕೊಳ್ಳಬೇಕು ಡಾ, ಜಿ.ಕೆ ಕಾಳೆ.

ನರೇಗಲ್ ಫೆ.16

ಪಟ್ಟಣದ ಎಸ್.ಎ.ವಿ.ವಿ.ಪಿ ಸಮಿತಿಯ ಬಸವೇಶ್ವರ ಸಿ.ಬಿ.ಎಸ್.ಸಿ ಪ್ರೌಢ ಶಾಲೆಯ ಮಂಗಳವಾರ ನಡೆದ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಯಾಗಿ ಡಾ, ಜಿ.ಕೆ ಕಾಳೆಯವರು ವಿದ್ಯಾರ್ಥಿಗಳ ಜೀವನ ಬಂಗಾರ ಜೀವನವಾಗಿದೆ. ಯಶಸ್ಸು ಪಡೆಯಲು ಶಿಸ್ತು ಮತ್ತು ಸಮಯ ಪಾಲನೆ ಮಾಡಬೇಕು ಜೀವನದಲ್ಲಿ ಶಿಸ್ತು ಮತ್ತು ಸಮಯಕ್ಕೆ ತನ್ನದೇ ಆದಂತ ಪ್ರಾಮುಖ್ಯತೆ ಇದೆ. ಅದನ್ನು ನೀಡಲೇ ಬೇಕು. ಶಿಸ್ತು ಮತ್ತು ಸಮಯದ ಮಹತ್ವವನ್ನು ಯಾರು ಸರಿಯಾಗಿ ತಿಳಿದಿರುತ್ತಾರೆಯೋ ಅವರು ಜೀವನದಲ್ಲಿ ಸಾಧನೆಯ ಉತ್ತುಂಗಕ್ಕೆ ಹೋಗುತ್ತಾರೆ. ಅಮೂಲ್ಯ ಸಮಯದ ಸದ್ಬಳಕೆ ಹಾಗೂ ಸಮಯವನ್ನು ನ್ಯಾಯೋಜಿತವಾಗಿ ಉಪಯೋಗಿಸಿ ಕೊಳ್ಳುವ ಚಾಣಾಕ್ಷತೆ ಹೊಂದಿರುತ್ತಾನೆ ಎಂದು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಚೇರಮನ್ನ ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಎಂದಾಕ್ಷಣ ಯಾರೂ ಎದೆಗುಂದ ಬೇಕಿಲ್ಲ ಪ್ರಯತ್ನ, ಪರಿಶ್ರಮಗಳ ಮೂಲಕ ನಮ್ಮ ಜೀವನದ ಕನಸನ್ನು ನನಸಾಗಿಸುವುದು ನಮ್ಮ ಕೈಯಲ್ಲಿಯೇ ಇದೆ ಯಾವುದೇ ಪರೀಕ್ಷೆ ಇರಲಿ, ಪ್ರತಿಯೊಬ್ಬರಲ್ಲಿಯೂ ಏನೋ ಆತಂಕ ಇದ್ದೇ ಇರುತ್ತದೆ. ಅಭ್ಯರ್ಥಿಗಳಲ್ಲಿ ಅಂಜಿಕೆ ಇದ್ದರೆ ಪೋಷಕರಲ್ಲಿ ಕಾಳಜಿ ಮಿಶ್ರಿತ ಕಳವಳವನ್ನು ಕಾಣಬಹುದು. ಅದರಲ್ಲಿಯೂ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸೀರಿಯಸ್‌ ಆಗಿ ತೆಗೆದು ಕೊಳ್ಳಬೇಕು ಎನ್ನುವುದೂ ನಿಜ. ‘ಸಾಧನೆ’ ಎನ್ನುವುದು ಸಾಧಿಸುವವರ ಸ್ವತ್ತೇ ಹೊರತು, ಸೋಮಾರಿಗಳದ್ದಲ್ಲ. ಪರೀಕ್ಷಾರ್ಥಿಗಳಿಗೆ ‘ಸಮಯ’ ಎಂಬುದು ತುಂಬಾ ಅಮೂಲ್ಯವಾದುದು. ಎಲ್ಲೂ ವಿಷಯಗಳಿಗೂ ಪ್ರಾಮುಖ್ಯವನ್ನು ಕೊಟ್ಟು, ಪ್ರತಿ ದಿನವೂ ಸತತವಾಗಿ ಅಭ್ಯಾಸ ಮಾಡಬೇಕು. ಪ್ರಯತ್ನ ‘ಪರಿಶ್ರಮ ಮತ್ತು ಏಕಾಗ್ರತೆ ಇವೇ ಯಶಸ್ಸಿನ ಗುಟ್ಟು ಎಂಬುದನ್ನು ನೆನಪಿಡಿ. ಎಂದು ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿ ಸೋಮನಕಟ್ಟಿಮಠ ಕಾರ್ಯಕ್ರಮ ವನ್ನುದ್ದೇಶಿಸಿ ಉತ್ತಮ ನೈತಿಕ ಮೌಲ್ಯಗಳು ಪ್ರತಿ ಮಗು/ವಿದ್ಯಾರ್ಥಿಗಳಿಗೆ ಗೌರವ ಪ್ರಾಮುಖ್ಯತೆಯನ್ನು ಹೊಂದಿವೆ. ಆದರೆ ಈ ಅನೇಕ ಮೌಲ್ಯಗಳು ಎಲ್ಲಾ ಮಕ್ಕಳಲ್ಲಿ ಹುಟ್ಟಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, ಈ ಗುಣಗಳನ್ನು ಅವರಲ್ಲಿ ಅಳವಡಿಸಿ ಕೊಳ್ಳಬೇಕು, ಇದರಿಂದ ಅವರು ಕುಟುಂಬದ ಜವಾಬ್ದಾರಿಯುತ ವ್ಯಕ್ತಿಗಳಾಗಿ ಬೆಳೆಯುತ್ತಾರೆ ಮತ್ತು ಸಮಾಜದಲ್ಲಿಯೂ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ವೈಭವ ಬಂಡಿಹಾಳ ಸ್ವಾಗತಿಸಿದರು. ಪ್ರತೀಕ್ಷಾ ಮ್ಯಾಗೇರಿ, ವರ್ಷಾ ರಡ್ಡೆರ, ಸಂಗೀತಾ ಪೂಜಾರ ನಿರೂಪಿಸಿದರು. ಮನೋಜು ಸರ್ವಿ ವಂದಿಸಿದರು ನಂತರ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಮಯದಲ್ಲಿ ಬಿ.ಎಚ್.ಎಸ್ ಎ.ವಿ.ಪಿ ಆಡಳಿತ ಅಧಿಕಾರಿ ಆರ್.ಎನ್ ಗೌಡರ, ಸದಾಶಿವ ಕರಡಿ, ಮಲ್ಲಿಕಾರ್ಜುನಪ್ಪ ಮೆಣಸಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶಾಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಮಕ್ಕಳು ಸೇರಿದಂತೆ ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button