“ನಶ್ವರ ಬಾಳು ಶೂನ್ಯದೊಳಗೆ”…..

ಓಮನುಜ ನೀನೇಷ್ಟು ಸ್ವಾರ್ಥಿ
ಸೃಷ್ಠಿಯ ಸಿರಿಯನ್ನುಂಡು
ಅಹಂ ಬೆಳಸಿಕೊಂಡಿ
ತಂದೆ ತಾಯಿ ಜನ್ಮ ನೀಡಿದ
ಫಲ ಮರೆತು ಬಿಟ್ಟಿ
ಅಕ್ಕ ತಂಗಿ ಅಣ್ಣ ತಮ್ಮರ
ಒಲುಮೆಯ ಮರೆತು ಬಿಟ್ಟಿ
ಗುರು ಹಿರಿಯರ ಅನುಭವ
ಅಮೃತವಾಣಿ ಕೇಳವಲ್ಲಿ
ಸ್ನೇಹಿತರ ನಿಶ್ವಾರ್ಥ ವಿಶ್ವಾಸ
ಪ್ರೀತಿ ಕಡೆಗಾಣಿಸಿ ಬಿಟ್ಟಿ
ಉಳಿಸಿ ಗಳಸಿ ಅನುಭವಸಲು
ಗಳಿಗೆ ಸಿಗದೆ ಪರದಾಡಿ ಬಿಟ್ಟಿ
ಒಂದು ದಿನ ನಿರ್ಜನ
ಪ್ರದೇಶದಡೆಗೆ ಸದ್ದಿಲ್ಲದೆ
ನಡೆದು ಬಿಟ್ಟಿ
ನಶ್ವರ ಬಾಳು ಶೂನ್ಯದೊಳಗೆ
ಕಾಣದ ರೂಪದಲಿ ಅಡಗಿ ಬಿಟ್ಟಿ
ಶ್ರೀದೇಶಂಸು

ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.