ಸಂಸ್ಕಾರಯುತ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ – ಯತೀಶ್.ಎಂ ಸಿದ್ದಾಪುರ ಅನಿಸಿಕೆ.
ಚಳ್ಳಕೆರೆ ಮೇ.12

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುವುದರಿಂದ ಉತ್ತಮ ಸಮಾಜ ನಿರ್ಮಾಣ ವಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂ ಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದ್ದಾರೆ. ನಗರದ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ” ವಿದ್ಯಾರ್ಥಿ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಶಿಬಿರದ ಪ್ರಯುಕ್ತ ಮಕ್ಕಳಿಗೆ ಭಜನೆ, ವಿವಿಧ ಮಂತ್ರಗಳ ಪಠಣ, ಸೃಜನ ಶೀಲತೆಯನ್ನು ಬೆಳೆಸುವ ಆಟಗಳನ್ನು ಸಂತೋಷ ಕುಮಾರ ಅವರ ನೇತೃತ್ವದಲ್ಲಿ ಆಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತಾಜೀ ತ್ಯಾಗಮಯೀ, ಮಾತಾಜೀ ಜ್ಯೋತ್ಸ್ನಾಮಯೀ, ಮದ್ದಿಹಳ್ಳಿಯ ಜಗನ್ನಾಥ, ಮಮತ ಕೃಷ್ಣ, ಸಂಗೀತ ವಸಂತಕುಮಾರ್, ದೈವಿಕ್, ಹರ್ಷಿತಾ, ಪ್ರತೀಕ್ಷಾ, ಯುಕ್ತ, ಯಶಸ್ಸು, ದವನ್, ಧ್ರುವ, ನಿಖಿಲೇಶ್ ಯಾದವ್, ಯಶಸ್ವಿ,ಲಕ್ಷ್ಮೀ, ಸಮರ್ಥ್,ಕಿರಣ್, ಮನ್ವಿತ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ವರದಿ:ಯತೀಶ್.ಎಂ ಸಿದ್ದಾಪುರ,ಚಳ್ಳಕೆರೆ.