ಸರಕಾರಕ್ಕೆ 29. ಲಕ್ಷ ಆದಾಯ ತಂದ ಮಾನ್ವಿ ವಲಯ ಅಬಕಾರಿ ಇನ್ಸ್ ಪೆಕ್ಟರ್ ಅಧಿಕಾರಿ – ಯಮನೂರ್ ಸಾಬ್ ಹೊಸಮನಿ.
ಮಾನ್ವಿ ಜೂ.03

ಸರಕಾರದ ಅಧಿಕಾರಿಗಳು ಸರಿಯಾಗಿ ಡ್ಯೂಟಿ ಮಾಡಲ್ಲ ಎಂದು ಮೂಗು ಮುರಿಯುತ್ತ ಆರೋಪಿಸುವವರೆ ಜಾಸ್ತಿ. ಆದರೆ ಮಾನ್ವಿ ಅಬಕಾರಿ ಇಲಾಖೆಯ ವಲಯ ಇನ್ಸ್ ಪೆಕ್ಟರ್ ಯಮನೂರ್ ಸಾಬ್ ಹೊಸಮನಿ. ಅವರು ಅಕ್ರಮ ಮದ್ಯ ದಂಧೆಕೋರರಿಗೆ ಚಳಿ ಬಿಡಿಸುತ್ತ ದಂಡ ಹಾಕುವ ಮೂಲಕ ಪ್ರಾಮಾಣಿಕವಾಗಿ ಕೆಲಸ ಮಾಡಿ ಸರಕಾರಕ್ಕೆ 29. ಲಕ್ಷ ಆದಾಯ ತಂದು ದಕ್ಷ ಅಧಿಕಾರಿ ಯಾಗಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ಅಬಕಾರಿ ಇಲಾಖೆ ವ್ಯಾಪ್ತಿಯಲ್ಲಿ ಕಳ್ಳಬಟ್ಟಿ ಸಾರಾಯಿ, ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿರುವುದನ್ನು ಮನಗಂಡು ಅಬಕಾರಿ ಇನ್ಸ್ ಪೆಕ್ಟರ್ ಯಮನೂರ್ ಸಾಬ್ ಹೊಸಮನಿ. ಅವರು ಕೇವಲ ಎರಡು ವರ್ಷದಲ್ಲಿಯೇ ಸರಕಾರಕ್ಕೆ 29. ಲಕ್ಷ ಆದಾಯ ತಂದು 32 ವಾಹನ ಜಪ್ತಿ, 83 ಘೋರ ಪ್ರಕರಣ, 259 ಕಳ್ಳ ಭಟ್ಟಿ ಪ್ರಕರಣ ಬಿಯರ್ ಹಾಗೂ ಲಿಕ್ಕರ್ ಸೇರಿ ಒಟ್ಟು 2382 ಲೀಟರ್ ಮದ್ಯ ವಶಪಡಿಸಿಕೊಂಡು ದಕ್ಷ ಅಧಿಕಾರಿಯಾಗಿ ಸೇವೆ ಮಾಡುತ್ತಿದ್ದಾರೆ.

ಮಾನ್ವಿ ಅಬಕಾರಿ ಇಲಾಖೆ ವ್ಯಾಪ್ತಿಯಲ್ಲಿ ಸನ್ನದುದಾರರು ಷರತ್ತು ಉಲ್ಲಂಘಿಸಿರುವ ದೂರುಗಳು ಹಾಗೂ ಅಕ್ರಮ ಮದ್ಯ ಸಾಗಣೆ ಮಾಡುತ್ತಿರುವ ದೂರುಗಳು ಬಂದರೆ ಸಾಕು ಇನ್ಸ್ ಪೆಕ್ಟರ್ ಹೊಸಮನಿ ಅವರು ಕೂಡಲೇ ಸ್ಪಂದಿಸಿ ಕಾನೂನಾತ್ಮಕವಾಗಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸುವ ಕೆಲಸ ಮಾಡುತ್ತಿದ್ದಾರೆಂದು ಸಂಘಟನಾಕಾರರ ಅಭಿಪ್ರಾಯವಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ