“ಕುಷ್ಠ ರೋಗ ಮುಕ್ತ ಭಾರತದ ಕಡೆಗೆ ನಮ್ಮ ನಡೆ” – ಆರೋಗ್ಯ ಜಾಗೃತಿ ಆಂದೋಲನ.
ಅಮೀನಗಡ ಫೆ.03

ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ “ಕುಷ್ಠ ರೋಗ ಮುಕ್ತ ಭಾರತದ ಕಡೆಗೆ” ನಮ್ಮ ನಡೆ 30 ಜನೇವರಿ 2026 ರಿಂದ 13 ಫೇಬ್ರುವರಿ ರ ವರೆಗೆ ಸ್ಪರ್ಶ ಕುಷ್ಠ ರೋಗ ನಿರ್ಮೂಲನಾ ಆಂದೋಲನಾ ಹಮ್ಮಿ ಕೊಳ್ಳಲಾಗಿದೆ. ಎಲ್ಲಾ ಸರಕಾರಿ ಶಾಲಾ ಕಾಲೇಜ್ ಹಾಗೂ ಪಟ್ಟಣ ಪಂಚಾಯತ ನಗರ ಸಭೆ ಸದಸ್ಯರಿಗೆ ಅಧಿಕಾರಿ ನೌಕರರಿಗೆ ಕುಷ್ಠ ರೋಗ ನಿರ್ಮೂಲನಾ ರೋಗದ ಬಗ್ಗೆ ಮಾಹಿತಿ ಸಂಪರ್ಕ ಶಿಕ್ಷಣ ಜಾಗೃತಿ ಮೂಡಸಲಾಗುವುದೆಂದು ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ ಮಾಹಿತಿ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿದರು.

ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಜಾಗೃತಿ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ ಸಭಾಪತಿ ಸಂತೋಷ ಈ ಕಂಗಳ, ಪಟ್ಟಣ ಪಂಚಾಯತ ಸದಸ್ಯರಾದ ಬಾಬು ಎಮ್ ಛಬ್ಬಿ, ಸಯ್ಯದ ಎಮ್ ಬಾವೂರ, ಆರೋಗ್ಯ ನಿರೀಕ್ಷಕ ಸಂತೋಷ ವ್ಯಾಪಾರಿಮಠ, ಕಂದಾಯ ನಿರೀಕ್ಷಕ, ಎಸ್ ವಾಯ್ ಮಹಾಗೊಂಡಪ್ಪನವರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸಿ ಎಸ್ ಕೋಲ್ಕಾರ, ಸಯ್ಯದ ಅಗ್ನಿ, ಶ್ವೇತಾ ಚಲಮಿ, ಸುಪ್ರೀಯಾ ಮಾಗಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಭಾಗವಹಿಸಿದ್ದರು.

