ರಾಜ್ಯದಲ್ಲಿ ಕಾಂಗ್ರೆಸ್ ಪರ ವಾತಾವರಣ ಇದೆ-ಆರತಿ ಕೃಷ್ಣ.
ತರೀಕೆರೆ ಮೇ.5
ದಿನನಿತ್ಯದ ಬಳಕೆ ವಸ್ತುಗಳಾದ ಗ್ಯಾಸ್,ಪೆಟ್ರೋಲ್, ಡೀಸೆಲ್ ಇತರೆ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನಜೀವನ ಕಷ್ಟಕರವಾಗಿದೆ, ಬಿಜೆಪಿ ಸರ್ಕಾರದಿಂದ ಎಂದು ಅನಿವಾಸಿ ಭಾರತೀಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರತಿ ಕೃಷ್ಣ ರವರು ಇಂದು ಪುರಸಭಾ ಸದಸ್ಯರಾದ ಗೀತಾ ಗಿರಿರಾಜ್ ರವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಜನ ಬದಲಾವಣೆ ಬಯಸಿದ್ದಾರೆ ಕಾಂಗ್ರೆಸ್ ಪರ ವಾತಾವರಣ ಇದೆ, ಕಾಂಗ್ರೆಸ್ ಸರ್ಕಾರ ಬಂದರೆ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯಡಿ 2,000ಗಳನ್ನು ಪ್ರತಿ ತಿಂಗಳು ನೀಡುವುದು, ಪ್ರತಿ ಬಿಪಿಎಲ್ ಕುಟುಂಬಕ್ಕೆ ಅನ್ನ ಭಾಗ್ಯ ಯೋಜನೆ ಅಡಿ ಪ್ರತಿ ತಿಂಗಳು 10 ಕೆಜಿ ಅಕ್ಕಿ ಉಚಿತವಾಗಿ ನೀಡಲಿದೆ, ಮತ್ತು ಪದವೀಧರರಿಗೆ ಮಾಸಿಕ ರೂ 3000 ಗಳು, ಡಿಪ್ಲೋಮಾ ಪದವೀಧರರಿಗೆ 1500 ರೂ ಗಳು,ಯುವ ನಿಧಿ ಯೋಜನೆ ಅಡಿ ನೀಡುತ್ತೇವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಈ ಪಂಚ ಸವಲತ್ತುಗಳನ್ನು ಗ್ಯಾರಂಟಿ ಕಾರ್ಡಿನೊಂದಿಗೆ ಭರವಸೆ ನೀಡಿದ್ದು, ತರೀಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ ಎಚ್ ಶ್ರೀನಿವಾಸ್ ಬಹುಮತದಿಂದ ಗೆಲುವು ಸಾಧಿಸಲಿರುವರು, ಕರ್ನಾಟಕದ ಬಿಜೆಪಿ ಸರ್ಕಾರ ಹನಿವಾಸಿ ಭಾರತೀಯ ಕನ್ನಡಿಗರಿಗೆ ಯಾವುದೇ ಅನುದಾನ ಕೊಟ್ಟಿಲ್ಲ, ಪ್ರಾಮುಖ್ಯತೆಯನ್ನು ಕೊಟ್ಟಿಲ್ಲ, ಗಲ್ಫ್ ದೇಶಗಳಲ್ಲಿ 8 ಲಕ್ಷ ಕನ್ನಡಿಗರಿದ್ದಾರೆ ಅವರನ್ನು ನಿರ್ಲಕ್ಷ ಮಾಡಲಾಗಿದೆ ಎಂದು ಹೇಳಿದರು. ಮಾಜಿ ಪುರಸಭಾ ಅಧ್ಯಕ್ಷರಾದ ಪರ್ವೀನ್ ತಾಜ್ ಮಾತನಾಡಿ ಕ್ಷೇತ್ರದಲ್ಲಿ ಅವಕಾಶ ಮುಖ್ಯವಲ್ಲ ಪಕ್ಷ ಮುಖ್ಯ ಆದ್ದರಿಂದ ಕಾಂಗ್ರೆಸ್ ಗೆಲ್ಲುತ್ತದೆ. ಆರತಿ ಕೃಷ್ಣರವರು ತುಂಬಾ ಜನ ಅನಿವಾಸಿ ಭಾರತೀಯರ ಕಷ್ಟಗಳಿಗೆ ಸ್ಪಂದಿಸಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ಕಮಲಾ ರಾಜೇಂದ್ರ ಉಪಾಧ್ಯಕ್ಷರಾದ ರಿಹಾನ ಪರ್ವೀನ್, ಸದಸ್ಯರಾದ ಗೀತಾ ಗಿರಿರಾಜ್, ದಿವ್ಯ ರವಿ, ಸಮೀಮ್ ಬಾನು, ಪಾರ್ವತಮ್ಮ, ಪುರಸಭಾ ಮಾಜಿ ಅಧ್ಯಕ್ಷರಾದ ಹೇಮಲತಾ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಭಾಗ್ಯಲಕ್ಷ್ಮಿ, ಪ್ರಕಾಶ್ ವರ್ಮ, ಕೃಷ್ಣ, ಗಿರಿರಾಜ್, ಮನಸುಳಿ ಮೋಹನ್, ಮುಂತಾದ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ