ಚಾಲಕನ ಅಜಾಗರೂಕತೆ ಇಂದ ಬಸ್ ಕೋರೆ (ತಗ್ಗು) ಗೆ ಜಾರಿದೆ ಇದರಿಂದ – ಪ್ರಾಣಾಪಾಯ ಆಗಿಲ್ಲ ಪರಚಿದ ಗಾಯಗಳಾಗಿವೆ.
ಅಸ್ಕಿ ಅ.03

ತಾಳಿಕೋಟೆ ತಾಲೂಕಿನ ಅಸ್ಕಿ ಹತ್ತಿರ ಬಸ್ ರೋಡ್ ಸೈಡ ಇರುವ ಕೋರೆ (ತಗ್ಗು) ಗೆ ಜಾರಿದೆ ಹೀಗಾಗಿ ಬಸ್ ಲ್ಲಿ ಇರುವ 36 ಪ್ರಯಾಣಿಕರು ಯಾವುದೇ ರೀತಿಯ ಪ್ರಾಣ ಹಾನಿಯಾಗಿಲ್ಲ ಕೆಲವೊಂದು ಜನರಿಗೆ ಪರಚಿದ ಗಾಯಗಳಾಗಿವೆ. ಸುದೈವ ಸಂಗತಿ ಏನೆಂದರೆ ದಸರಾ ರಜೆಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಮನೆಯಲ್ಲಿ ಇದ್ದಾರೆ. ಶಾಲಾ ಮಕ್ಕಳು ಬಚಾವ್ ಅಂತಾ ಹೇಳಬಹುದು.

ತಾಳಿಕೋಟೆಯಿಂದ ಬಂಟನೂರು ಪಿರಾಪುರ್ ಮಾರ್ಗ ವಾಗಿ ಬೇಕಿನಾಳ ಬರುವ ಬಸ್ ಬೇಕಿನಾಳ ಬಂದು ಮರಳಿ ತಾಳಿಕೋಟೆಗೆ ಹೋಗೋವಾಗ ಬಸ್ ನಲ್ಲಿ ಸುಮಾರು 36 ಜನರು ಇದ್ದರು ಚಾಲಕನ ಅಜಾಗರೂಕತೆ ಇಂದ ಜಲ್ಪುರ್ ಟು ಅಸ್ಕಿ ಮಧ್ಯೆ ಇರುವ ರೋಡನಲ್ಲಿ ಕರವಿಂಗ್ ನಲ್ಲಿ ಒಂದು ಕೈ ಬಿಟ್ಟ ಕಾರಣ ಬಸ್ ರೋಡ್ ಪಕ್ಕ ಇರುವ (ಕೋರೆ) ತಗ್ಗು ಗೆ ಜಾರಿತು. ನೆನ್ನೆ ದಿನ ಸ್ವಲ್ಪ ಮಳೆ ಆದ ಕಾರಣ ರೋಡ್ ಸೈಡ್ ಹೊಲಸು ಕೆಸರು ಆಗಿದೆ ಆದ ಕಾರಣ ಡ್ರೈವರ್ ಗೆ ಬಸ್ ಕಂಟ್ರೋಲ್ ಆಗಿಲ್ಲ ಅದೃಷ್ಟವಶಾತ್ ಬಸ್ ನಲ್ಲಿ ಯಾವದೇ ಪ್ರಾಣಪಾಯ ಆಗಿಲ್ಲ ಎಲ್ಲಾರು ಸುರಕ್ಷಿತವಾಗಿ ಬಸ್ ನಿಂದ ಹೊರಗಡೆ ಬಂದ್ರು ಆದಷ್ಟು ಮಳೆ ಬಂದಾಗ ವಾಹನಗಳನ್ನು ರೋಡ್ ಕೆಳಗೆ ಹೋಗ್ಬಾರ್ದು ಎಂದು ಹೇಳಿದ ಪ್ರತ್ಯೇಕ ದರ್ಶಿಗಳಾದ ಸಾರ್ವಜನಿಕರ ಮೂಲಕ ಸುದ್ದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶರಣಯ್ಯ.ಈ.ಬೆಕಿನಾಳಮಠ.ಕಲಕೇರಿ