ಸುಂಕದಕಲ್ಲು ಗ್ರಾಮದಲ್ಲಿ ಗ್ರಾಮೀಣ ಖೋ ಖೋ ಪಂದ್ಯಾವಳಿಗಳು ಜರುಗಿದವು.
ಕೊಟ್ಟೂರು ಅ.14

ತಾಲೂಕಿನ ಸುಂಕದಕಲ್ಲು ಗ್ರಾಮದಲ್ಲಿ ಶ್ರೀ ಭಜರಂಗಿ ಬಾಯ್ಸ್ ಖೋ ಖೋ ವತಿಯಿಂದ 2 ನೇ ಬಾರಿಗೆ ಗ್ರಾಮೀಣ ಖೋ ಖೋ ಪಂದ್ಯಾವಳಿಗಳನ್ನು ಸುಂಕದಕಲ್ಲು ಪ್ರೌಢಶಾಲೆ ಮೈದಾನದಲ್ಲಿ ಅಕ್ಟೋಬರ್ 12 ಮತ್ತು 13 ರಂದು ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಮೈದೂರು ಪ್ರಥಮ ಸ್ಥಾನ ಪಡೆದು 10,000 ನಗದು ಬಹುಮಾನ ಮತ್ತು ಆಕರ್ಷಕ ಟ್ರೋಪಿ ದ್ವಿತೀಯ ಸ್ಥಾನ ಪಡೆದು 5,000 ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ ಮಡ್ರಳ್ಳಿ ತೃತೀಯ ಸ್ಥಾನ ಪಡೆದು 3,000 ನಗದು ಬಹುಮಾನ ಮತ್ತು ಆಕರ್ಷಕ ಟ್ರೋಪಿ ಮುಡಿಗೇರಿಸಿ ಕೊಂಡರು.

ಈ ಟೂರ್ನಮೆಂಟ್ ನಡೆಸಲು ಸಹಕರಿಸಿದ ದಾನಿಗಳಿಗೂ ಸುತ್ತ ಮುತ್ತಲಿನ ಗ್ರಾಮದವರಿಗೂ ಸುಂಕದಕಲ್ಲು ಗ್ರಾಮದವರು ಧನ್ಯವಾದಗಳು ತಿಳಿಸಿದರು. ಗುರುಪ್ರಸಾದ್ ಶಿಕ್ಷಕರು ಅಂಪೈರ್ ರಾಗಿದ್ದರು.

ಈ ಸಂದರ್ಭದಲ್ಲಿ ಸಾವಜ್ಜಿ ರಾಜೇಂದ್ರ ಪ್ರಸಾದ್ ಬಿ.ಬಸಪ್ಪ ಗ್ರಾಪಂ ಅಧ್ಯಕ್ಷರು ಶಿವನಂದ ಶಿಕ್ಷಕರು ಸ್ನೇಹ ಕುಮಾರಿ ಮೊರಬ ಗ್ರಾ. ಪಂ. ಸದಸ್ಯರಗಳಾದ ಜಿ.ಅಂಜನಪ್ಪ ಶಿವನಗೌಡ ಚನ್ನಬಸಮ್ಮ ಲಲಿತಮ್ಮ ಕ್ರೀಡಾ ಪ್ರೋತ್ಸಾಹಕರಾದ ಬಿ ಎಂ ಈಶ್ವರ ಬಿ ಹನುಮೇಶ್ ಬಸವರಾಜ್ ಕೆ ನಾಗರಾಜ್ ಜಿ ಆನಂದ ಎನ್ ಡಿ ನಿರಂಜನ್ ಟಿ ಸಿದ್ದೇಶ್ ಎಂ ಚನ್ನನಗೌಡ ಬಿ ಓಬಪ್ಪ ದ್ವಾರಕೇಶ ವಿನಯ್ ಕುಮಾರ್ ಮತ್ತಿತರರು ಸೇರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು