ಗಾಂಧಿ ಸ್ಮೃತಿ ಮತ್ತು ವ್ಯಾಸನ ಮುಕ್ತ ಸಮಾವೇಶ – ಕಾರ್ಯಕ್ರಮ ಜರುಗಿತು.

ಕೊಟ್ಟೂರು ಅ.16

ಕೊಟ್ಟೂರು ಮತ್ತು ಕೂಡ್ಲಿಗಿ ತಾಲ್ಲೂಕಿನ ಸಹಭಾಗಿತ್ವದಲ್ಲಿ ಕೊಟ್ಟೂರಿನ ಬನಶಂಕರಿ ಸಮುದಾಯ ಭವನದಲ್ಲಿ ಗಾಂಧಿ ಸ್ಮೃತಿ ಮತ್ತು ವ್ಯಸನ ಮುಕ್ತ ಸಮಾವೇಶ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜನಜಾಗೃತಿ ವೇದಿಕೆ ಕೊಪ್ಪಳ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಯವರಾದ ನಾಗೇಶ್ ಸರ್ ರವರು ನವಜೀವನ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತ ಬೆಂಕಿ ದೇಹವನ್ನು ಸುಟ್ಟರೆ ಸಾರಾಯಿ ಆತ್ಮವನ್ನು ಸುಡುತ್ತದೆ ಎಂದು ಮಹಾತ್ಮ ಗಾಂಧೀಜಿ ಯವರು ತಿಳಿಸಿದ್ದಾರೆ. ಮಹಾತ್ಮ ಗಾಂಧೀಜಿಯವರು ಕಂಡಂತಹ ದುಶ್ಚಟ ಮುಕ್ತ ಸಮಾಜದ ಕನಸನ್ನು ಇಂದು ನನಸು ಮಾಡುತ್ತಿರುವರು ಪೂಜ್ಯ ವೀರೇಂದ್ರ ಹೆಗ್ಗಡೆ ಯವರು 1992 ರಲ್ಲಿ ಜನಜಾಗೃತಿ ವೇದಿಕೆ ಪ್ರಾರಂಭ ಮಾಡಿ ಇಲ್ಲಿಯವರೆಗೆ 1871 ಮದ್ಯ ವರ್ಜನ ಶಿಬಿರಗಳನ್ನು ಮಾಡಿ ಸುಮಾರು 136000 ಸದಸ್ಯರನ್ನು ದುಶ್ಚಟದಿಂದ ಹೊರ ಬರುವಂತೆ ಉತ್ತಮ ಬದುಕನ್ನು ಕಟ್ಟಿ ಕೊಳ್ಳುವಂತೆ, ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಅಲ್ಲದೆ ದುಶ್ಚಟಕ್ಕೆ ದಾಸರಾಗುವ ಮೊದಲೇ ಯುವ ಸಮೂಹವನ್ನು ಜಾಗೃತಿ ಗೊಳಿಸಬೇಕೆಂಬ ಕಾರಣಕ್ಕಾಗಿ ಜನಜಾಗೃತಿ ವೇದಿಕೆ ವತಿಯಿಂದ ಶಾಲಾ- ಕಾಲೇಜುಗಳಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದ ಮೂಲಕ ಅರಿವನ್ನು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ.

ಅಲ್ಲದೆ ಜನಜಾಗೃತಿ ವೇದಿಕೆ ಮೂಲಕ ಶೌರ್ಯ ವಿಪತ್ತು ನಿರ್ವಹಣೆ ಗ್ರಾಮ ಕಲ್ಯಾಣ ಕಾರ್ಯಕ್ರಮ,ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ ಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು. ಕಾವಲಿ ಶಿವಪ್ಪ ರವರು ಮಾತನಾಡಿ ಮದ್ಯ ವರ್ಜನ ಶಿಬಿರದಿಂದ ಕುಡಿತ ಬಿಟ್ಟು ಕುಟುಂಬಕ್ಕೆ ಬೇಕಾದ ಒಳ್ಳೆಯ ವ್ಯಕ್ತಿಗಳಾಗಿ ಬಾಳಬೇಕು ಎಂದು ಶುಭ ಹಾರೈಸಿದರು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಸಿದ್ದಯ್ಯರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಮೂಲಕ ಆಗುತ್ತಿರುವ ಕಾರ್ಯಕ್ರಮಗಳಿಂದ ಎಷ್ಟೋ ಕುಟುಂಬಗಳಿಗೆ ಒಳ್ಳೆಯ ದಾಗಿದೆ ಯಾವತ್ತೂ ನಾವು ಯೋಜನೆಯ ಜೊತೆ ಇರುತ್ತೇವೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ 1841 ನೇ ಮದ್ಯವರ್ಜನ ಶಿಬಿರದ ಅಧ್ಯಕ್ಷರಾದ ಮೈದೂರು ಶಿವಣ್ಣ ರವರು ಕ್ಷೇತ್ರದ ಮೂಲಕ ಪೂಜ್ಯರು ಸಮಾಜಕ್ಕೆ ಕೊಡುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ನಮ್ಮ ಜೀವನ ಸಮಿತಿ ಸದಸ್ಯರ ಮುಂದಿನ ಭವಿಷ್ಯಕ್ಕೆ ಶುಭ ಕೋರಿದರು. ಉಳಿದಂತೆ ಜನಜಾಗೃತಿ ಸದಸ್ಯರಾದ ಕೂಡ್ಲಿಗಿ ಸಿದ್ದೇಶ್,ಕೊಟ್ಟೂರಿನ ಮಲ್ಲಿಕಾರ್ಜುನಪ್ಪ, ಯೋಗೀಶ್ವರ ದಿನ್ನೆ, ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷರಾದ ಹಾಳ್ಯದ ತೋಟದ ಶಿವಣ್ಣ ಕಾರ್ಯಕ್ರಮದ ಕುರಿತು ಹರ್ಷವನ್ನು ವ್ಯಕ್ತಪಡಿಸಿ ನವ ಜೀವನ ಸಮಿತಿಯ ಸದಸ್ಯರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕೂಡ್ಲಿಗಿ ಕ್ಷೇತ್ರ ಯೋಜನಾಧಿಕಾರಿ ಸಂತೋಷ್, ಕೊಟ್ಟೂರಿನ ಕ್ಷೇತ್ರ ಯೋಜನಾಧಿಕಾರಿ ನವೀನ್ ಕುಮಾರ್, ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷರುಗಳಾದ ಶ್ರೀಮತಿ ಉಮಾದೇವಿ, ಜನಜಾಗೃತಿ ಸದಸ್ಯರಾದ ಗುಂಡಪ್ಪ, ಯೋಜನೆಯ ಮೇಲ್ವಿಚಾರಕ ಹಂತದ ಸಿಬ್ಬಂದಿಗಳಾದ ರುದ್ರೇಶ್, ಮಾಂತೇಶ್, ಜಗದೀಶ್, ಸೌಮ್ಯ,ವೀರೇಶ್, ಕಚೇರಿ ಸಿಬ್ಬಂದಿ ಶಶಿಕುಮಾರ್ & ಸೇವಾ ಪ್ರತಿ ನಿಧಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನವ ಜೀವನ ಸಮಿತಿ ಸದಸ್ಯರು ಮತ್ತು ಅವರ ಕುಟುಂಬದವರು ಭಾಗವಹಿಸಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button