ನಾಯಿ ಕಡಿತ ನಿರ್ಲಕ್ಷ್ಯ ಬೇಡ “ಆಂಟಿ ರೇಬೀಸ್” – ಲಸಿಕೆ ಪಡೆಯಿರಿ.
ಗುಂಡನಪಲ್ಲೆ ಅ.16

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ, ಜಿಲ್ಲಾ ಸಮೀಕ್ಷಣಾ ಘಟಕ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ ಗುಂಡನಪಲ್ಲೆ ಚಾವಡಿಯಲ್ಲಿ, “ರೇಬೀಸ್ ರೋಗ ದಿನ” ಜನಜಾಗೃತಿ ಆಯೋಜಿಸಲಾಗಿತ್ತು. ಆರೋಗ್ಯ ನಿರೀಕ್ಷಣಾಧಿಕಾರಿ, ಎಸ್.ಎಸ್ ಅಂಗಡಿಯವರು, ಸಾರ್ವಜನಿಕರಿಗೆ ರೇಬೀಸ್ ರೋಗದ ಮಾಹಿತಿ ಕರಪತ್ರ ವಿತರಿಸಿ ಸಾಕು ಪ್ರಾಣಿ ನಾಯಿ ಕಡಿತ ಮಾರಣಾಂತಿಕ ವಾಗಬಹುದು ರೇಬೀಸ್ ರೋಗವು ಪ್ರಾಣಿಗಳ ಜೊಲ್ಲು ರಸ ರೇಬೀಸ್ ವೈರಾಣು ಮಾನವನ ದೇಹ ಸೇರಿ ರೇಬೀಸ್ ಮಾರಣಾಂತಿಕ ವಾಗುತ್ತದೆ ನಾಯಿ ಕಡಿದ ತಕ್ಷಣ ನೀರು ಸಾಬೂನಿನಿಂದ ತೊಳೆಯಿರಿ.

ಪಾವಿಡೋನ್ ಐಯೋಡಿನ್ ಹಚ್ಚಿರಿ, ತಕ್ಷಣವೇ ಸಮೀಪದ ಆಸ್ಪತ್ರೆ ಹೋಗಿರಿ ವೈದ್ಯರ ಸಲಹೆ ಮೆರೆಗೆ ಆಂಟಿ ರೇಬೀಸ್ ಲಸಿಕೆ. ರೇಬೀಸ್ ಇಮ್ಯೂನ್ ಗ್ಲೋಬ್ಯುಲಿನ್. ಪೂರ್ಣ ಪ್ರಮಾಣ ಲಸಿಕೆ ಪಡೆಯಿರಿ ನಿರ್ಲಕ್ಷತನ ಬೇಡ ಮೂಢನಂಬಿಕೆ ಬೇಡ. ನಿಮ್ಮ ಸಾಕು ನಾಯಿಗಳಿಗೆ ತಪ್ಪದೇ ಪಶು ಆಸ್ಪತ್ರೆಯಲ್ಲಿ ನಿಯಮಿತ ಲಸಿಕೆ ಹಾಕಿಸಿ ನಾಯಿ ಕಡಿತ ತಡೆಗಟ್ಟಿ ಎಂದು ಮಾಹಿತಿ ನೀಡಿದರು. “ರೇಬೀಸ್ ದಿನ ಜನಜಾಗೃತಿ” ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವಿವಿಧ ಹಂತದ ಆರೋಗ್ಯ ಅಧಿಕಾರಿಗಳು ಆಶಾ ಕಾರ್ಯಕರ್ತರು, ಗ್ರಾಮದ ಸಂಗಪ್ಪ ಬೇನಾಳ, ಬಸವರಾಜ ಜೋಗರಡ್ಡಿ, ಪರಸಪ್ಪ ವಡ್ಡರ, ರಾಜು ನಾಗೂರ, ಕಿರಣ ವಾಲೀಕಾರ, ರುದ್ರಪ್ಪ ಸುಂಕದ ಗ್ರಾಮದ ಮುಖಂಡರು, ಯುವಕರು ಭಾಗವಹಿಸಿದ್ದರು.