ಬೆಳೆ ಪರಿಹಾರಕ್ಕಾಗಿ ರೈತರಿಂದ – ತಹಸಿಲ್ದಾರರಿಗೆ ಮನವಿ.
ಕೊಟ್ಟೂರು ಅ.22

ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟ ಕೊಟ್ಟೂರು ರವರಿಂದ ಅಕ್ಟೋಬರ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಈರುಳ್ಳಿ ಮೆಕ್ಕೆಜೋಳ ಶೇಂಗಾ ಇತ್ಯಾದಿ ಬೆಳೆಗಳ ಹಾನಿಯ ಬಗ್ಗೆ ತಹಸಿಲ್ದಾರರಾದ ಜಿ.ಕೆ ಅಮರೇಶ್ ರವರಿಗೆ ಬೆಳೆ ಪರಿಹಾರದ ಬಗ್ಗೆ ಮನವಿ ಮಾಡಿ ಕೊಳ್ಳುವುದರ ಮೂಲಕ ಅರ್ಜಿ ಸಲ್ಲಿಸಲಾಯಿತು. ಅಧಿಕವಾಗಿ ಮಳೆ ಆಗಿರುವುದರಿಂದ ಇನ್ನೇನೂ ಫಸಲುಗಳನ್ನು ಕಟಾವು ಮಾಡುವ ಹಂತದಲ್ಲಿ ಬೆಳೆ ಮಳೆಯಿಂದ ನಾಶ ವಾಗಿರುತ್ತವೆ. ಇದರ ವಿಷಯವಾಗಿ ವಿಮೆ ಕಟ್ಟಿದ ರೈತರು ವಿಮೆ ಕಂಪನಿಗೆ ಕರೆ ಮಾಡಿದರೆ ಯಾವುದೇ ರೀತಿಯ ಉತ್ತರಗಳಿಲ್ಲ ಹೀಗೆ ಮಾಡುತ್ತಾ ಪರಿಹಾರ ನೀಡುವ ಸಂದರ್ಭದಲ್ಲಿ ಬೆಳೆ ನಾಶ ಆಗಿರುವ ಪ್ರಮಾಣದಷ್ಟು ಪರಿಹಾರ ನೀಡದೆ ವಿಮೆ ಕಂಪನಿಯವರು ಅವರಿಗೆ ಮನ ಬಂದಂತೆ ಪರಿಹಾರ ನೀಡುತ್ತಾರೆ ಹೀಗಾಗಿ ಸರಿಯಾಗಿ ಪರಿಶೀಲನೆ ಮಾಡಿ ನಾಶವಾದ ಬೆಳೆಗಳಿಗೆ ತಕ್ಕ ಪರಿಹಾರ ನೀಡಬೇಕು.

ಇದರಿಂದ ರೈತರಿಗೆ ಆಗುವ ಅನ್ಯಾಯ ತಪ್ಪಿಸ ಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಮರಳು ಸಿದ್ದಪ್ಪ ಉಮೇಶ್ ಅಧ್ಯಕ್ಷರು ಬಿ.ಭರಮನಗೌಡ ಉಪಾಧ್ಯಕ್ಷರು ಮಂಜುನಾಥ್ ನಗರಕಟ್ಟಿ ಶಂಕ್ರಪ್ಪ ಸಂಗಮೇಶ್ವರ ಎಸ್ ಚನ್ನಬಸಪ್ಪ ಮತ್ತಿತರರು ಮನವಿ ಮಾಡಿಕೊಂಡರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು