ವಿಧಾನ ಸೌಧದಲ್ಲಿ ಒಂದು ನಿಮಿಷವೂ ವ್ಯರ್ಥ ಮಾಡದೆ ಅನೇಕ ಕಾಮಗಾರಿಗಳನ್ನು ತರುತ್ತಾರೆ – ಆರೋಗ್ಯ ಸಚಿವ ದಿನೇಶ್.ಆರ್ ಗುಂಡೂರಾವ್.
ಕೂಡ್ಲಿಗಿ ಅ.22

ಆರೋಗ್ಯ- ಕುಟುಂಬ ಕಲ್ಯಾಣದ ಸಚಿವರಾದ ದಿನೇಶ್ ಆರ್.ಗುಂಡುರಾವ್ ಅವರನ್ನು ಕೂಡ್ಲಿಗಿ ಕ್ಷೇತ್ರಕ್ಕೆ ಶಾಸಕರಾದ ಡಾ, ಶ್ರೀನಿವಾಸ್. ಎನ್.ಟಿ ಅವರು ಅದ್ಧೂರಿಯಾಗಿ ಬರ ಮಾಡಿಕೊಂಡರು. ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮಕ್ಕೆ ವಿಜೃಂಭಣೆಯಾಗಿ ಹೂಮಾಲೆ ಹಾಕಿ ನಮನ ಸಲ್ಲಿಸಿದರು.ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವರು ಪ್ರಥಮ ಬಾರಿಗೆ ವೀಕ್ಷಿಸಿ ಶಂಕುಸ್ಥಾಪನೆ ಮತ್ತು ಭೂಮಿ ಪೂಜೆಯನ್ನು ಶಾಸಕರ ಅಧ್ಯಕ್ಷತೆಯಲ್ಲಿ ಮಂಗಳವಾರ ರಂದು ನೆರವೇರಿಸಿದರು.ಸಚಿವರು ಮಾತನಾಡುತ್ತಾ, ನಮ್ಮಲ್ಲಿ ಡಾ, ಶ್ರೀನಿವಾಸ್. ಎನ್.ಟಿ ಅವರು ಒಬ್ಬ ಮಾದರಿ ಶಾಸಕರಾಗಿದ್ದಾರೆ. ವಿಧಾನ ಸೌಧದಲ್ಲಿ ಒಂದು ನಿಮಿಷವೂ ವ್ಯರ್ಥ ಮಾಡದೇ ಅನೇಕ ಕಾಮಗಾರಿಗಳನ್ನು ಹುಡುಕಿ ಅನುಮೋದನೆ ಮಾಡಿಸಿ ಕೊಂಡು ತರುವಂತದ್ದು ಸಂತಸ ತಂದಿದೆ ಎಂದು ಹೇಳಿದರು. ವೈದ್ಯರು ಮೊದಲು ಕೆಲಸ ಮಾಡಬೇಕು. ಎಲ್ಲಾ ರೀತಿಯ ಸಲಕರಣೆಗಳನ್ನು ಒದಗಿಸುತ್ತೇವೆ. ವಿಜಯನಗರ, ಕೊಪ್ಪಳಕ್ಕೆ ಕಳುಹಿಸಿ ಕೊಡದಂತೆ ಸ್ಥಳೀಯವಾಗಿ ಚಿಕಿತ್ಸೆಯನ್ನು ಒದಗಿಸಲಿ ಎಂದರು.ಜಿಲ್ಲಾ ಮಟ್ಟದ ಆಸ್ಪತ್ರೆಯಾಗಿ ಬೆಳೆಯುವ ನಿಟ್ಟಿನಲ್ಲಿ 50 ಹೆಚ್ಚುವರಿ ಬೆಡ್ಡುಗಳ ವ್ಯವಸ್ಥೆ, ವೈದ್ಯರ ವಸತಿ ಗೃಹಗಳು, ಪಾರ್ಕಿಂಗ್ ವ್ಯವಸ್ಥೆ, ಶವಗಾರ ಕೊಠಡಿ, ಇನ್ನೂ ಮುಂತಾದವುಗಳ ಕಾಮಗಾರಿಗಳನ್ನು ವೀಕ್ಷಿಸಿರುವಂತದ್ದು ಖುಷಿ ತಂದಿದೆ ಎಂದರು.

ಪ್ರಾದೇಶಿಕವಾಗಿ ಗುಡೇಕೋಟೆ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉನ್ನತಿಕರಿಸಲು ಸರ್ಕಾರ ದಿಂದ ಅನುಮೋದನೆ ಕೊಡಬೇಕಾಗಿದೆ. ಅದರ ಹಣವನ್ನು ಮೀಸಲು ಇಟ್ಟಿದ್ದೇವೆ ಎಂದರು. ಸಚಿವರು, ಶಾಸಕರನ್ನು ಅಭಿವೃದ್ಧಿಯ ಹರಿಕಾರರು ಎಂದು ಬಣ್ಣಿಸಿದ್ದಾರೆ. ಶಾಸಕರು ಮಾತನಾಡುತ್ತಾ, ನಮ್ಮ ಭಾಗದ ಆಸ್ಪತ್ರೆಗಳಲ್ಲಿ ಸಾಕಷ್ಟು ಉದ್ಯೋಗಗಳು ಖಾಲಿ ಇವೆ. ಹಾಗೆಯೇ ಇಲ್ಲಿ ನಿರುದ್ಯೋಗದ ಸಮಸ್ಯೆಯೂ ಹೆಚ್ಚಿನ ಪ್ರಮಾಣದಲ್ಲಿ ಇದೆ. ಹೀಗಾಗಿ ಮಾನ್ಯ ಸಚಿವರು ನರ್ಸ್ಗಳು, ಪ್ಯಾರಮೆಡಿಕಲ್, ಅಂಬ್ಯುಲೆನ್ಸ್ ಡ್ರೈವರ್ ಗಳನ್ನು ತುಂಬಿ ಕೊಳ್ಳಲು ಸ್ಥಳೀಯರಿಗೆ ಅವಕಾಶ ಮಾಡಿ ಕೊಡಬೇಕು ಎಂಬುದಾಗಿ ಲಿಖಿತ ಮತ್ತು ಮೌಖಿಕವಾಗಿ ಮನವಿ ಮಾಡಿ ಕೊಂಡರು. ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾಧಿಕಾರಿಗಳಾದ ಎಂ. ಎಸ್. ದಿವಾಕರ್, ತಹಶೀಲ್ದಾರರಾದ ಎಂ ರೇಣುಕಾ, ವಿವಿಧ ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು ಮತ್ತು ಸಮಸ್ತ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶ್ರೀ ಕಾವಲಿ ಶಿವಪ್ಪನಾಯಕ, ಉಪಾಧ್ಯಕ್ಷರಾದ ಪ್ರಭಾವತಿ ಕೆ ಪ್ರಭಾಕರ, ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಶೂಕರ್ ಬಾಯಿ, ಪ.ಪಂ ಸರ್ವ ಸದಸ್ಯರು, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಗುರುಸಿದ್ದನಗೌಡ, ಮಾಜಿ ಜಿ.ಪಂ. ಸದಸ್ಯರಾದ ಶಶಿಧರಸ್ವಾಮಿ, ಮಾಜಿ ತಾ. ಪಂ.ಸದಸ್ಯರಾದ ಕುರಿಹಟ್ಟಿ ಬೋಸಣ್ಣ, ಕಾಕಿಬಸಣ್ಣ, ಮಂಜಣ್ಣ, ಮುಖಂಡರಾದ ರಾಜಣ್ಣ, ಜಿಂಕಲ್ ನಾಗಮಣಿ, ಉಮೇಶ್, ಮಂಜಣ್ಣ, ಉದಯಜನ್ನು, ಬೋಸೆಮಲ್ಲಯ್ಯ, ಕಲ್ಲೇಶ, ಮಲ್ಲಣ್ಣ, ದೊಡ್ಡಪ್ಪ, ಮಹೇಶ, ಗಂಗಾಧರ, ನಾಗರಾಜ ಏ.ಕೆ, ಕೊಟ್ರೇಶ, ಬಸವರಾಜ, ಹನುಮಂತ, ಮಾರಣ್ಣ, ಡಾ, ಓಂಕಾರಪ್ಪ, ಹರೀಶ್, ಸಾರ್ವಜನಿಕರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ. ವಿಜಯನಗರ