ಬೇವೂರು ಕಾಲೇಜಿನಲ್ಲಿ ಜಾಗೃತಿ ಅರಿವು ಸಪ್ತಾಹ.
ಬೇವೂರು ಅ.30

ಯುವಕರು ದೇಶದ ಆಸ್ತಿಯಾಗಿದ್ದು ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸಲು ಕಂಕಣ ಬದ್ದರಾಗ ಬೆಕೆಂದು ಉಪನ್ಯಾಸಕರಾದ ಎಸ್.ಎಸ್ ಆದಾಪೂರ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು ಸೇವಾ ಮನೋಭಾವನೆಯನ್ನು ರೂಢಿಸಿ ಕೊಳ್ಳಬೆಕೆಂದು ಹೇಳಿದರು. ಅತಿಥಿಗಳಾಗಿ ಭಾಗವಹಿಸಿ ಮಾತಾನಾಡಿದ ಡಾ, ಸಂಗಮೇಶ ಹಂಚಿನಾಳ ಬುದ್ದ, ಬಸವ, ಅಂಬೇಡ್ಕರ್ ಅವರು ಈ ನೆಲದಲ್ಲಿ ಜಾಗೃತಿ ಮೂಡಿಸಿ ಚಿರ ಸ್ಮರಣೀಯ ರೆನಿಸಿದ್ದಾರೆ. ಆರೋಗ್ಯ, ಪರಿಸರ ಕಾಳಜಿ, ಭ್ರಷ್ಟಾಚಾರ ಮುಂತಾದವುಗಳ ಕುರಿತು ಜಾಗೃತಿ ಮೂಡಿಸಲು ಎನ್.ಎಸ್.ಎಸ್. ಸಪ್ತಾಹ ಚಟುವಟಿಕೆಗಳು ಪ್ರೇರಕ ಎನಿಸಿವೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ, ಜಗದಿಶ ಭೈರಮಟ್ಟಿ, ಹಿರಿಯ ಉಪನ್ಯಾಸಕರಾದ ಬಿ.ಬಿ ಬೇವೂರು, ಎನ್.ಎಸ್.ಎಸ್ ಸಂಯೋಜನಾ ಅಧಿಕಾರಿಗಳಾದ ಜಿ.ಎಸ್ ಗೌಡರ, ಇಂಗ್ಲೀಷ ಉಪನ್ಯಾಸಕ ಡಿ.ವಾಯ್ ಬುಡ್ಡಿಯವರ, ಡಾ, ಎ.ಎಮ್ ಗೊರಚಿಕ್ಕನವರ ಉಪಸ್ಥಿತರಿದ್ದರು. ನಾಗೇಶ ಬೆಣ್ಣೂರು ನಿರೂಪಿಸಿ ವಂದಿಸಿದರು. ಫಾತಿಮಾ ನಧಾಪ, ವಿಜಯಲಕ್ಷ್ಮೀ ಬಂಡಿವಡ್ಡರ, ಜ್ಯೋತಿ ಗೌಡರ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ವರದಿ:- ಅಮರೇಶ. ಗೊರಚಿಕ್ಕನವರ