ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಪುಣ್ಯ ಸ್ಮರಣೆಯೊಂದಿಗೆ – ಸ್ಪರ್ಶ ಕುಷ್ಠರೋಗ ಜಾಗೃತಿ ಆಂದೋಲನ.
ಶಿರೂರು ಜ.30

ಬಾಗಲಕೋಟ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆಯಲ್ಲಿ “ಮಹಾತ್ಮಾ ಗಾಂಧಿಜೀ ಪುಣ್ಯ ಸ್ಮರಣೆ, ಸ್ಪರ್ಶ ಕುಷ್ಠರೋಗ ನಿರ್ಮೂಲನೆ ಜಾಗೃತಿ ಪ್ರತಿಜ್ಞಾ ಬೋಧನೆ ಆಯೋಜಿಸಲಾಗಿತ್ತು. ಬಾಲಕಿಯರ ವಸತಿ ಶಾಲಾ ಮುಖ್ಯೋಪಾಧ್ಯಾಯಕರಾದ ಭಾರತಿ ಸಜ್ಜನ ಆರೋಗ್ಯ ನಿರೀಕ್ಣಾಧಿಕಾರಿ ಎಸ್ ಎಸ್ ಅಂಗಡಿ ಶಾಲಾ ಗುರು ವೃಂದವರು ಮಹಾತ್ಮಾ ಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮುಖಾಂತರ “ಸ್ಪರ್ಶ ಕುಷ್ಠರೋಗ ನಿವಾರಣೆ ಪ್ರತಿಜ್ಞಾ ವಿಧಿಯನ್ನು ಆರೋಗ್ಯ ನಿರೀಕ್ಷಣಾಧಿಕಾರಿ ಎಸ್ ಎಸ್ ಅಂಗಡಿ, ಸ್ಪರ್ಶ ಕಷ್ಠರೋಗ ನಿವಾರಣೆ ಪ್ರತಿಜ್ಞಾ ವಿಧಿಬೋಧಸಿ ಕುಷ್ಠರೋಗ ನಿರ್ಮೂಲನೆಗೆ ಒಟ್ಟಾಗಿ ನಾವು ಶ್ರಮಿಸೋಣ.

ಕುಷ್ಠ ರೋಗದ ಬಗ್ಗೆ ತಪ್ಪು ಕಲ್ಪನೆಗಳನ್ನು ಹೋಗಲಾಡಿಸೋಣ ತದ್ದು ಮಚ್ಛೆ ಮುಚ್ಚಿಡ ಬೇಡಿ ಮನದಲ್ಲಿ “ಮೈಕೋಬ್ಯಾಕ್ಟೇರಿಯಂ ಲೇಪ್ರೆಸೂಕ್ಷ್ಮ ರೋಗಾಣು” ಕಾರಣ ವೈದ್ಯರಲ್ಲಿ ಪರೀಕ್ಷಿಸಿ ಕೊಳ್ಳಿ ಶೀಘ್ರ ಪತ್ತೆ ಶೀಘ್ರ ಚಿಕಿತ್ಸೆಯಿಂದ ಅಂಗವಿಕಲತೆ ತಡೆಯಬಹುದು ಕುಷ್ಠರೋಗ ಭಯ ಬೇಡ ಬಹು ಔಷಧಿಯಿಂದ ಸಂಪೂರ್ಣ ಗುಣಮುಖ ಕೈಜೋಡಿಸಲು ಜಾಗೃತಿ ಮೂಡಿಸಲಾಯಿತು. ವಸತಿ ಶಾಲಾ ಪ್ರಾಂಶುಪಾಲರಾದ ಭಾರತಿ ಸಜ್ಜನ ಮಾತನಾಡಿ ರಾಷ್ಟ್ರಪಿತ ಮಹಾತ್ಮ ಗಾಂಧಿಜೀವರ ತತ್ವ ಆದರ್ಶಗಳ ಪಾಲನೆ ಹಾಗೂ ವೈಯಕ್ತಿಕ ಸ್ವಚ್ಚತೆ, ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯವಂತ ರಾಗಿರಬಹುದು ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸ್ಪರ್ಶ ಕುಷ್ಠರೋಗ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಶಾಲಾ ಗುರು ವೃಂದವರು, ವಸತಿ ಶಾಲಾ ಸಿಬ್ಬಂದಿಗಳು, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.