ಉತ್ತಮ ಆರೋಗ್ಯವು ಜೀವನದ ಗುಣ ಮಟ್ಟವನ್ನು ಹೆಚ್ಚಿಸುತ್ತದೆ – ಕುಮಾರಸ್ವಾಮಿ ಕೋರಧಾನ್ಯಮಠ.
ನರೇಗಲ್ ಮಾ.28

ಪ್ರತಿಯೊಬ್ಬ ವ್ಯಕ್ತಿಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರಲ್ಲಿ ಆರೋಗ್ಯದ ಕಾಳಜಿ ಅತೀ ಅಗತ್ಯ. ಆರೋಗ್ಯವಂತ ಮಹಿಳೆಯಿಂದ ಇಡೀ ಕುಟುಂಬ. ಅರೋಗ್ಯಕರ ವಾಗಿರುತ್ತದೆ. ಉತ್ತಮ ಆರೋಗ್ಯವು ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಮತ್ತು ಜೀವನದ ಗುಣ ಮಟ್ಟವನ್ನು ಹೆಚ್ಚಿಸುತ್ತದೆ. ಆರೋಗ್ಯವಂತ ವ್ಯಕ್ತಿಗಳು ಹೆಚ್ಚು ಸಕ್ರಿಯ, ತೃಪ್ತಿಕರ ಜೀವನವನ್ನು ಆನಂದಿಸುತ್ತಾರೆ ಮತ್ತು ದೈಹಿಕ ಮಿತಿಗಳಿಲ್ಲದೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬಹುದು. ಎಂದು ಪ.ಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಹೇಳಿದರು. ಪಟ್ಟಣದ ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಜೀವನೋಪಾಯ ಇಲಾಖೆ ಮತ್ತು ನರೇಗಲ್ಲ ಪಟ್ಟಣ ಪಂಚಾಯಿತಿ ಸಂಯಕ್ತ ಆಶ್ರಯದಲ್ಲಿ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಪಿ.ಎಂ ಸ್ವನಿದಿಯ ಸಮೃದ್ಧಿ ಯೋಜನೆ ಉತ್ಸವ ಕಾರ್ಯಕ್ರಮದಡಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಉತ್ತೇಜನ ನೀಡಲು ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಆರೋಗ್ಯಕರ ದೇಹವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ಹೆಚ್ಚಿನ ಶಕ್ತಿಯ ಮಟ್ಟಗಳು ದೊರೆಯುತ್ತವೆ. ಇದು ಕೆಲಸದಲ್ಲಿ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ, ವ್ಯಕ್ತಿಗಳು ಕಾರ್ಯಗಳನ್ನು ಪರಿಣಾಮಕಾರಿ ಯಾಗಿ ನಿರ್ವಹಿಸಲು ಮತ್ತು ಹೆಚ್ಚು ಕ್ರಿಯಾತ್ಮಕ ಜೀವನ ಶೈಲಿಯನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ ಎಂದು ಮಾತನಾಡಿದರು. ಪ.ಪಂ. ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರು ಹೆಚ್ಚಾಗಿ ರಸ್ತೆ ಬದಿಗಳಲ್ಲಿ ವ್ಯವಹಾರವನ್ನು ಮಾಡುತ್ತಿರುವುದರಿಂದ ಧೂಳು, ವಾಹನಳಿಂದ ಬರುವ ಹೊಗೆ ಪರಿಣಾಮದಿಂದ ಆರೋಗ್ಯದ ಮೇಲೆ ಸಮಸ್ಯೆ ಯಾಗಿರುತ್ತದೆ.ಆದ್ದರಿಂದ ಈ ಯೋಜನೆ ಅಡಿಯಲ್ಲಿ ಎಲ್ಲಾ ಬೀದಿ ಬದಿ ವ್ಯಾಪಾರಿಗಳಿಗೆ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿದೆ. ಪಟ್ಟಣ ಸೇರಿದಂತೆ ಐದು ಮಜರೆ ಗ್ರಾಮಗಳಲ್ಲಿನ ಬೀದಿ ಬದಿ ವ್ಯಾಪಾರಸ್ಥರು ಆರೋಗ್ಯ ಶಿಬಿರ ಸದುಪಯೋಗ ಪಡಿಸಿಕೊಂಡು ತಮ್ಮ ಆರೋಗ್ಯದ ಕಾಳಜಿಯನ್ನು ವಹಿಸುವುದು ಅಗತ್ಯವಾಗಿದೆ ಎಂದರು.ಆರೋಗ್ಯ ತಪಾಸಣೆಗೆ ಡಾ, ನವೀನಕುಮಾರ ನಂದೆಪ್ಪಗೌಡರ, ಲ್ಯಾಬ್ ಟೇಕನಿಶೀಯನ ಮಲ್ಲಿಕಾರ್ಜುನ ಹಿರೇವಡೆಯರ ಬೀದಿ ವ್ಯಾಪಾರಿಗಳ ಆರೋಗ್ಯ ತಪಾಸಣೆ ಕೈಗೊಂಡರು. ಈ ಸಮಯದಲ್ಲಿ ಪ.ಪಂ. ಅಧ್ಯಕ್ಷ ಫಕೀರಪ್ಪ ಮಳ್ಳಿ, ಸ್ಥಾಯಿ ಕಮೀಟಿ ಚೇರಮನ್ ಮುತ್ತಪ್ಪ ನೂಲ್ಕಿ, ಈರಪ್ಪ ಜೋಗಿ, ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ಶ್ರೀಶೈಲಪ್ಪ ಬಂಡಿಹಾಳ, ವಿಜಯಲಕ್ಷ್ಮೀ ಚಲವಾದಿ, ಅಕ್ಕಮ್ಮ ಮಣ್ಣೂಡ್ಡರ, ಬಸಿರಾಬಾನು ನದಾಫ, ಕಳಕನಗೌಡ ಪೊಲೀಸ್ ಪಾಟೀಲ, ಶೇಖಪ್ಪ ಕೆoಗಾರ, ಪ.ಪಂ ಸಿಬ್ಬಂದಿ ರಮೇಶ ಹಲಗಿಯವರ, ವೈ. ಮಡಿವಾಳರ, ಕಾವ್ಯಾ ಅರವಟಗಿಮಠ, ಶಂಕ್ರಪ್ಪ ದೊಡ್ಡಣ್ಣವರ, ಸಂಜೀವ ಗುಡಿಮನಿ, ಆರೀಫ ಮಿರ್ಜಾ, ಉದಯ, ನಜ್ಞಾ ಬೆಲೇರಿ, ಶೇಖಪ್ಪ ಹೊನ್ನವಾದ ಸೇರಿದಂತೆ ಬೀದಿ ಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ