ಆಧ್ಯಾತ್ಮಿಕ ಶಿಬಿರಕ್ಕೆ ನೋಂದಾಯಿಸಲು – ಮನವಿ.

ಚಳ್ಳಕೆರೆ ಮೇ.18

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಜೂನ್ 1 ರಂದು ಬೆಳಿಗ್ಗೆ 10:00 ಗಂಟೆ ಯಿಂದ ಸಂಜೆ 4 ಗಂಟೆಯ ವರೆಗೆ ಒಂದು ದಿನದ ಆಧ್ಯಾತ್ಮಿಕ ಶಿಬಿರ ಆಯೋಜಿಸಿದ್ದು.

ನವಲಗುಂದದ ಶ್ರೀಶಾರದೇಶ್ವರಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅನನ್ಯಮಯೀ ಅವರಿಂದ ವಿಶೇಷ ಭಜನೆ, ಪೂಜ್ಯ ಮಾತಾಜೀ ತ್ಯಾಗಮಯೀ ಅವರಿಂದ ಧ್ಯಾನಾಭ್ಯಾಸ, ಪ್ರವಚನ, ಆಧ್ಯಾತ್ಮಿಕ ಪ್ರಶ್ನೋತ್ತರ, ಆಶು ಭಾಷಣ ಸ್ಪರ್ಧೆ, ಶ್ರೀಶಾರದಾದೇವಿ ಜೀವನಗಂಗಾ ಕ್ವಿಜ್, ಭಕ್ತರಿಂದ ಅಭಿಪ್ರಾಯ ವಿನಿಮಯ, ಅನ್ನಪ್ರಸಾದ, ಕಾಫಿ ವಿರಾಮದ ವ್ಯವಸ್ಥೆ ಮಾಡಲಾಗಿದ್ದು.

ಈ ಶಿಬಿರದಲ್ಲಿ ಭಾಗವಹಿಸುವವರು ತಮ್ಮ ಹೆಸರನ್ನು ಮೇ 28 ರ ಒಳಗೆ ಶ್ರೀಶಾರದಾಶ್ರಮ ಅಥವಾ ಯತೀಶ್ ಎಂ ಸಿದ್ದಾಪುರ-7204351903 ಅವರಿಗೆ ನೀಡಿ ನೋಂದಾಯಿಸಿ ಕೊಳ್ಳುವಂತೆ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button