🚨 BREAKING NEWS🚨 BREAKING NEWS🚨ರಾಜ್ಯ ಮಟ್ಟದ ತನಿಖಾ ವರದಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ – ವಿರುದ್ಧ ಸಾರ್ವಜನಿಕರ ಆಕ್ರೋಶದ ಜ್ವಾಲೆ..!

ಬೆಂಗಳೂರು/ಸಾಲಿಗ್ರಾಮ ಮೇ.18

ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಭ್ರಷ್ಟಾಚಾರದ ಅಟ್ಟಹಾಸ ಮಿತಿಮೀರಿದ್ದು, ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ವರ್ಗಾವಣೆ ಆದೇಶ ಬಂದರೂ ಕುರ್ಚಿ ಬಿಟ್ಟು ಕದಲದ ಈ ಅಧಿಕಾರಿಯ ಆಸ್ತಿ ಮುಟ್ಟುಗೋಲು ಮತ್ತು ಲೋಕಾಯುಕ್ತ ದಾಳಿ ಯಾವಾಗ ಎಂಬ ಯಕ್ಷಪ್ರಶ್ನೆ ಈಗ ಇಡೀ ರಾಜ್ಯದ ಗಮನ ಸೆಳೆದಿದೆ.

💥 ಮುಖ್ಯಾಂಶಗಳು:-

ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಭ್ರಷ್ಟಾಚಾರದ ಮುಖವಾಡ ಬಯಲು..!

💥 ವರ್ಗಾವಣೆ ಆದೇಶಕ್ಕೆ ಕಿಮ್ಮತ್ತಿಲ್ಲ:-

ಮೇ 07 ರಂದೇ ಮೂಲ ಇಲಾಖೆಗೆ ಹಿಂತಿರುಗುವಂತೆ ರಾಜ್ಯ ಸರಕಾರ ಆದೇಶಿಸಿದ್ದರೂ, ಸರಕಾರಿ ಆದೇಶವನ್ನೇ ಗಾಳಿಗೆ ತೂರಿ ಇನ್ನೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕುರ್ಚಿಯಲ್ಲಿ ಕುಳಿತಿರುವ ಅಜಯ್ ಭಂಡಾರ್ಕರ್!

💥 80 ಲಕ್ಷದ ಪ್ಲ್ಯಾಟ್ ಬೇಡಿಕೆ:-

ವೆಂಕಟ ಲಕ್ಷ್ಮಿ ಬಹುಮಹಡಿ ಕಟ್ಟಡದ ಪರವಾನಗಿ ನೀಡಲು ಬಿಜೆಪಿ ಸದಸ್ಯ ಸಂಜು ದೇವಾಡಿಗ ಮೂಲಕ 80 ಲಕ್ಷ ರೂಪಾಯಿ ಮೌಲ್ಯದ ಪ್ಲ್ಯಾಟ್ ಬೇಡಿಕೆ ಇಟ್ಟಿರುವ ಸ್ಫೋಟಕ ಮಾಹಿತಿ!

💥 ಆರು ಬಂಗಲೆಗಳ ಒಡೆಯ:-

ಕೇವಲ ಅಲ್ಪ ಅವಧಿಯಲ್ಲಿ ಲಕ್ಷಾಂತರ ಮೌಲ್ಯದ ಭೂಮಿ ಮತ್ತು ಐಷಾರಾಮಿ ವಾಹನ ಖರೀದಿ; ಈತನ ಅಕ್ರಮ ಆಸ್ತಿಯ ಮುಟ್ಟುಗೋಲು ಯಾವಾಗ?

💥 ಲೋಕಾಯುಕ್ತ ತನಿಖೆಗೆ ಸಾರ್ವಜನಿಕರ ಆಗ್ರಹ:-

ಇಷ್ಟೆಲ್ಲಾ ಸಾರ್ವಜನಿಕ ಹಣ ಲೂಟಿ ಹೊಡೆಯುತ್ತಿರುವ ಅಧಿಕಾರಿಯ ಮೇಲೆ ಲೋಕಾಯುಕ್ತರ ದಾಳಿ ಯಾವಾಗ ನಡೆಯಲಿದೆ ಎಂಬ ತೀವ್ರ ಆಕ್ರೋಶ..!

🚨 ಸರಕಾರದ ಆದೇಶಕ್ಕೆ ಬೆಲೆಯಿಲ್ಲವೇ? ಕುರ್ಚಿ

ಬಿಡದ ಅಧಿಕಾರಿಯ ರಹಸ್ಯವೇನು..?

ಆರೋಗ್ಯ ಇಲಾಖೆಯ ಅಧಿಕಾರಿಯಾದ “ಶ್ರೀ ಅಜಯ್ ಭಂಡಾರ್ಕರ್” ಅವರನ್ನು ಮೇ 07 ರಂದೇ ತಕ್ಷಣ ಜಾರಿಗೆ ಬರುವಂತೆ ಮೂಲ ಇಲಾಖೆಗೆ ಹಿಂತಿರುಗುವಂತೆ ರಾಜ್ಯ ಸರಕಾರ ಸ್ಪಷ್ಟ ಆದೇಶ ನೀಡಿದೆ. KAMS ಅಧಿಕಾರಿಗಳಿಗೆ ಮೀಸಲಾದ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹುದ್ದೆಯಲ್ಲಿ ಅನ್ಯ ಇಲಾಖೆಯ ಅಧಿಕಾರಿ ಇಷ್ಟೊಂದು ಧೈರ್ಯದಿಂದ ಮುಂದುವರಿಯುತ್ತಿರುವುದು ಯಾರ ಪ್ರಭಾವದಿಂದ? ಸರಕಾರಿ ಆದೇಶವನ್ನೇ ಧಿಕ್ಕರಿಸುವ ಈತನ ಹಿನ್ನೆಲೆಯ ಗಡ್ಸ್ ಏನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

💰 ಕೋಟಿ ಕೋಟಿ ಲೂಟಿ: ಲಂಚದ ರೇಟ್ ಕಾರ್ಡ್..!

ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಪರವಾನಗಿ ಸಿಗಬೇಕಾದರೂ ಲಕ್ಷಾಂತರ ರೂಪಾಯಿ ಲಂಚ ನೀಡಬೇಕು ಎಂಬ ಆರೋಪ ಕೇಳಿಬಂದಿದೆ. ವೆಂಕಟ ಲಕ್ಷ್ಮಿ ಬಹುಮಹಡಿ ಕಟ್ಟಡದ ಪರವಾನಗಿ ನೀಡಲು ಪರೋಕ್ಷವಾಗಿ “80 ಲಕ್ಷ ರೂಪಾಯಿಯ ಪ್ಲ್ಯಾಟ್” ಬೇಡಿಕೆ ಇಟ್ಟಿರುವುದು ಇವರ ಭ್ರಷ್ಟಾಚಾರದ ಪರಾಕಾಷ್ಠೆಯನ್ನು ತೋರಿಸುತ್ತದೆ. ಕೇವಲ ಅಲ್ಪ ಅವಧಿಯಲ್ಲಿ ಆರು ಬಂಗಲೆಗಳು, ಐಷಾರಾಮಿ ಕಾರುಗಳು ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿ ಖರೀದಿಸಿರುವ ಈ ಅಧಿಕಾರಿಯ ಆದಾಯದ ಮೂಲ ಯಾವುದು?

📢 ಸಾರ್ವಜನಿಕರ ಉಗ್ರ ಪ್ರಶ್ನೆಗಳು ಮತ್ತು ಬೇಡಿಕೆಗಳು:-

೧. ಲೋಕಾಯುಕ್ತ ತನಿಖೆ ಮತ್ತು ದಾಳಿ ಯಾವಾಗ..?

ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯ ಅಕ್ರಮ ಗಳಿಕೆಯ ಬಗ್ಗೆ ಲೋಕಾಯುಕ್ತರು ಸ್ವಯಂ ಪ್ರೇರಿತ (Suo Motu) ದೂರು ದಾಖಲಿಸಿ ಕೊಂಡು ತಕ್ಷಣ ದಾಳಿ ನಡೆಸುವುದು ಯಾವಾಗ? ಭ್ರಷ್ಟಾಚಾರದ ಸಾಕ್ಷ್ಯಗಳು ಕಣ್ಣೆದುರೇ ಇದ್ದರೂ ತನಿಖಾ ಸಂಸ್ಥೆಗಳು ಮೌನ ವಹಿಸಿರುವುದರ ಮರ್ಮವೇನು?

ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಯಾವಾಗ..?

ಜನ ಸಾಮಾನ್ಯರ ತೆರಿಗೆ ಹಣವನ್ನು ಲೂಟಿ ಮಾಡಿ ಅಕ್ರಮವಾಗಿ ಗಳಿಸಿರುವ ಆರು ಬಂಗಲೆಗಳು ಸೇರಿದಂತೆ ಇಡೀ ಬೇನಾಮಿ ಆಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳುವುದು ಯಾವಾಗ?

ತಕ್ಷಣದ ಜೈಲು ಶಿಕ್ಷೆ ಎಂದು?

ವರ್ಗಾವಣೆ ಆದೇಶವನ್ನೇ ಗಾಳಿಗೆ ತೂರಿ ಸಂವಿಧಾನ ಮತ್ತು ಕಾನೂನನ್ನು ಉಲ್ಲಂಘಿಸುತ್ತಿರುವ ಅಜಯ್ ಭಂಡಾರ್ಕರ್‌ನನ್ನು ತಕ್ಷಣ ಅಮಾನತ್ ಗೊಳಿಸಿ, ತನಿಖೆಗೆ ಒಳಪಡಿಸಿ ಜೈಲಿಗಟ್ಟುವುದು ಯಾವಾಗ..?

ಎಚ್ಚರಿಕೆ:-

ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯ ಅಕ್ರಮಗಳ ವಿರುದ್ಧ ತಕ್ಷಣ ಲೋಕಾಯುಕ್ತ ದಾಳಿಯಾಗಿ, ಸೂಕ್ತ ಕಾನೂನು ಕ್ರಮ ಜರುಗದಿದ್ದಲ್ಲಿ ಉಡುಪಿಯ ಜನತೆ ಭ್ರಷ್ಟ ಅಧಿಕಾರಿಯ ವಿರುದ್ಧ ಬೀದಿಗಿಳಿದು ತೀವ್ರ ಸ್ವರೂಪದ ಉಗ್ರ ಹೋರಾಟ ನಡೆಸಲಿದ್ದಾರೆ..!

ವರದಿ:ಆರತಿ.ಗಿಳಿಯಾರು,ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button