ಕಿನ್ನಾಳ್ ರಾಜ್ ನಿರ್ದೇಶನದ “ಸಿಂಹರೂಪಿಣಿ” ಹಾಡು ಬಿಡುಗಡೆ.
ಬೆಂಗಳೂರು ಸ.15

ಶ್ರೀ ಚಕ್ರ ಫಿಲಂಸ್ ಲಾಂಛನದಲ್ಲಿ ಭಕ್ತಿ ಪ್ರಧಾನ ಚಲನ ಚಿತ್ರ “ಸಿಂಹರೂಪಿಣಿ” ಅದ್ದೂರಿ ಗ್ರಾಫಿಕ್ಸ್ ನೊಂದಿಗೆ ತೆರೆಗೆ ಬರಲು ಸಿದ್ಧವಾಗುತ್ತಿದ್ದು . ಇದೀಗ “ಮಾ ರುದ್ರಯಾ ರುದ್ರಾಣಿ” ಶ್ರೀ ಮಹಾಲಕ್ಷ್ಮಿ ಮಾಂಕಾಳಿ, ಜೈ ಜಯದುರ್ಗೆ ಶಿವದೂತೆ ಸರ್ವಶಕ್ತಿಯೇ ಓಂ ಕಾಳಿ’ ಹಾಡನ್ನು ಚಂದನ್ ಶೆಟ್ಟಿ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ಪ್ಯಾನ ಇಂಡಿಯಾ ಸಂಗೀತ ಸಂಯೋಜಕ ರವಿ ಬಸ್ರೂರು, ಸಂತೋಷ ವೆಂಕಿ, ಸಂಗೀತ ಸಂಯೋಜಕ ಆಕಾಶ ಪರ್ವ ಈ ಹಾಡಿಗೆ ಧ್ವನಿ ನೀಡಿದ್ದು. ಆಡಿಯೋ ಹಕ್ಕುಗಳನ್ನು ‘ಮಾಲು ನಿಪ್ನಾಳ ಮ್ಯೂಸಿಕ್ ಸಂಸ್ಥೆ’ ಯು ಅಧಿಕ ಬೆಲೆ ನೀಡಿ ಖರೀದಿ ಮಾಡಿರುವುದು ತಂಡಕ್ಕೆ ಸಿಕ್ಕ ಮೊದಲ ಗೆಲುವು ಆಗಿದೆ ಎಂದು ನಿರ್ದೇಶಕ ಕಿನ್ನಾಳ್ ರಾಜ್ ಹೇಳುತ್ತಾರೆ. ಈಗಾಗಲೇ ಲೂಪ್ ಸ್ಟುಡಿಯೋದಲ್ಲಿ ಎಲ್ಲ ಪೋಸ್ಟ ಪ್ರೊಡಕ್ಷನ್ ಕಾರ್ಯಗಳು ಮುಕ್ತಾಯ ಗೊಂಡಿದ್ದು ಅಮ್ಮನ ಪರಮಭಕ್ತ ಕೆ.ಎಂ ನಂಜುಂಡೇಶ್ವರ ಅವರು ಕಥೆ ಬರೆದು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಖ್ಯಾತ ನಿರೂಪಕಿ ಅಂಕಿತಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಇನ್ನೂಳಿದಂತೆ ಯಶ್‌ಶೆಟ್ಟಿ, ಯಶಸ್ವಿನಿ, ಪುನಿತ್, ರುದ್ರನಾಗ್, ದಿವ್ಯಾ ಆಲೂರು, ತೆಲುಗಿನ ಹಿರಿಯ ನಟರಾದ ಸುಮನ್. ತಮಿಳು ನಟ ದಿನಾ, ಹರೀಶ್ ರಾಯ್, ನೀನಾಸಂ ಅಶ್ವಥ್, ತಬಲಾ ನಾಣಿ, ದಿನೇಶ್ ಮಂಗಳೂರು, ಭಜರಂಗಿ ಪ್ರಸನ್ನ, ಅವರಂತ ಪ್ಯಾನ್ ಇಂಡಿಯ ಕಲಾವಿದರ ಜೊತೆ ಸಾಗರ್, ವಿಜಯ್ ಚಂಡೂರ್, ವರ್ಧನ್. ತೀರ್ಥಹಳ್ಳಿ, ಮನಮೋಹನ ರೈ, ನವಾಜ್, ಲೋಹಿತ್, ಪಿಳ್ಳಪ್ಪ, ವಿಜಯ್ ಬಸ್ರೂರು, ಸುನಂದಾ ಕಲ್ಬುರ್ಗಿ, ವೇದಾ ಹಾಸನ್, ರಾಧಾ ರಾಮಚಂದ್ರ, ಗುರುಮೂರ್ತಿ, ವೈಭವ್ ನಾಗರಾಜ, ಶಶಿಕುಮಾರ, ಯುವರಾಜ್, ನಂದನ ಜೊತೆಗೆ ಇನ್ನೂ ೬೫ ಕ್ಕೂ ಹೆಚ್ಚಿನ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಸಂಗೀತ ಆಕಾಶ ಪರ್ವ. ಛಾಯಾಗ್ರಹಣ ಕಿರಣ್ ಕುಮಾರ್, ಸಂಕಲನ ವೆಂಕಿ ಯು.ಡಿ.ವಿ , ಪಿ.ಆರ್.ಓ ಆರ್ ಚಂದ್ರಶೇಖರ್, ಡಾ.ಪ್ರಭು ಗಂಜಿಹಾಳ್. ಡಾ.ವೀರೇಶ್ ಹಂಡಿಗಿ ಅವರದ್ದಾಗಿದೆ. ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಬಾಲಸುಬ್ರಹ್ಮಣ್ಯಂ ಕಾರ್ಯ ನಿರ್ವಹಿಸಿದ್ದಾರೆ. ರಾಜಶೇಖರ್. ಮಲ್ಲಿಕ್. ನಿತ್ಯ ದಿನೇಶ್. ತೇಜಸ್ ನಿರ್ದೇಶನ ತಂಡದಲ್ಲಿದ್ದಾರೆ.
*****
ವರದಿ:
ಡಾ.ಪ್ರಭು ಗಂಜಿಹಾಳ
ಮೊ: ೯೪೪೮೭೭೫೩೪೬