ಕಾನಮಡಗು ಶ್ರೀ ಮಠದಲ್ಲಿನ ಭಾವಿ ಸ್ವಚ್ಛತೆ ಗೊಳಿಸಲು – ಮುಂದಾದ ಗ್ರಾಮಸ್ಥರು.
ಖಾನಾ ಹೊಸಹಳ್ಳಿ ಅ.22

ಸಮೀಪದ ಕಾನಾಮಡುಗು ಗ್ರಾಮದ ಶ್ರೀ ಶರಣ ಬಸವೇಶ್ವರ ಮಠದ ಪಕ್ಕದಲ್ಲೇ ಇರುವ ಇತಿಹಾಸ ಪ್ರಸಿದ್ಧ ಪುಷ್ಕರಣಿ 30 ವರ್ಷಗಳ ಹಿಂದೆ ಸದಾ ತುಂಬಿ ತುಳುಕುತ್ತಿದ್ದು. ಈ ಬಾವಿಯಲ್ಲಿ ಯುವಕರು ಬಾಲ್ಯದಲ್ಲಿ ಈಜು ಕಲಿಯುತ್ತಿದ್ದರು, ಶ್ರೀ ಮಠದ ಪರಂಪರೆಯಂತೆ ದಿನ ನಿತ್ಯ ಭಕ್ತರಿಗೆ ಅನ್ನ ದಾಸೊಹ ನಡೆಯುತ್ತಿರುವಾಗ ತುಪ್ಪ ಖಾಲೀಯಾದಾಗ ಶರಣರು ಮುತ್ತೈದೆರಿಂದ ಗಂಗಾ ಪೂಜೆ ಮಾಡಿಸಿದಾಗ ಇಡೀ ಬಾವಿಯೆಲ್ಲಾ ಶರಣರ ಮಹಿಮೆ ಯಿಂದ ಪವಾಡ ರೀತೀಯಲ್ಲಿ ತುಪ್ಪವಾದ ಘಟನೆ ವಿಸ್ಮಯ ಖುರುಹ ವಾಗಿದ್ದು ಹಿರಿಯರು ಹೇಳುತ್ತಾರೆ. ನಂತರ ಶಾಲಾ ಕಾಲೇಜುಗಳಲ್ಲಿ ತಾಲೂಕು ಮಟ್ಟ ಜಿಲ್ಲಾ ಮಟ್ಟ ವಲಯ ಮಟ್ಟದ ಕ್ರೀಡಾಕೂಟಗಳು ನಡೆದಾಗ ಆ ಶಾಲೆಯ ವಿದ್ಯಾರ್ಥಿಗಳು ಮಠದ ಬಾವಿಯಲ್ಲಿ ಸ್ನಾನ ಮಾಡಿ ಶರಣ ಬಸವೇಶ್ವರರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಜ್ಯೋತಿಯನ್ನು ತೆಗೆದು ಕೊಂಡು ಕ್ರೀಡಾಕೂಟಕ್ಕೆ ಹೋಗಿ ಜ್ಯೋತಿಯನ್ನು ಬೆಳಗಿಸುತ್ತಿದ್ದರು. ಈಗ ಶರಾಣಾರ್ಯಾರ ನೇತೃತ್ವದಲ್ಲಿ ಊರಿನ ಗ್ರಾಮಸ್ಥರು ಗಳಾದ ಬಿ,ಮಂಜುನಾಥ, ಶಿವಣ್ಣ, ಪ್ರಕಾಶ, ಸತೀಶ್, ಸುರೇಶ್, ಬಿ.ಬಸವರಾಜ, ರುದ್ರಪ್ಪ, ಓಬಳೇಶ್, ಗಾದ್ರಪ್ಪ, ಡ್ರೈವರ್ ನಾಗೇಂದ್ರಪ್ಪ, ಮೈಲಾರಪ್ಪ, ಮನೊಜ, ಲೋಕೇಶ, A.G ನಾಗರಾಜ್, ಅರುಣಾಚಾರಿ, ಪೀಕ್ಣರು ದುರುಗಪ್ಪ , ಬೊಮ್ಮಪ್ಪ, ಶಿಖರಪರು ಶರಣಪ್ಪ, ಬಾವಿತಳ್ಳಿ ಬಸವರಾಜ, ಗುಮ್ಮನೂರಯ್ಯರು ಚಂದ್ರಯ್ಯನರು, ಸಿದ್ದಯ್ಯನರು, ಅಮರೇಂದ್ರಯ್ಯರು, ಬಿ.ವೀರೇಶರು, ಮೂಲೇರ ಶರಣಪ್ಪ, ನೀರಗಂಟೀ ನಾಗರಾಜಪ್ಪ, ಬಿ,ಶರಣಪ್ಪ, ತಳವಾರ ಓಬಣ್ಣ, ತಳವಾರ ಶರಣಪ್ಪರು, ತಿಪ್ಪೇಸ್ವಾಮಿ, ಕೆ.ಡಿ.ಯಂ,ನಾಗೆಂದ್ರಪ್ಪ ,ಬಿ ಚನ್ನಪ್ಪನರು, ಬಾಲಣ್ಣ, ಜಯರಾಜ್, ಗಂಗಣ್ಣ ಮೇಷ್ಟ್ರ , ಮಂಜಣ್ಣ ಮೇಷ್ಟ್ರು, ಅಂಗಡಿ ಶರಣಪ್ಪ, ಶರಣಪ್ಪ, ದಿನೇಶ್, ಬೋರಪ, ಮಂಜುನಾಥ, ಡ್ರೈವರ್ ಶರಣಪ್ಪ, ಅಂಜಿನಪ, ಹನುಮಂತ, ಮರಿಯಪ್ಪರು ಹನುಮಂತಪ್ಪ, ನಿಂಗಪ್ಪ, ಶರಣಪ್ಪ, ಊರಿನ ಅನೇಕರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ